ಮಲೆನಾಡು ಭಾಗದಲ್ಲಿ ರಣಮಳೆ: ಧಾರಾಕಾರ ಮಳೆಗೆ ಕಾಫಿಬೆಳೆಗಾರರು ಕಂಗಾಲು

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ರಣ ಮಳೆ ಆರ್ಭಟಿಸಿದ್ದು, ಅಲಿಕಲ್ಲು ಸಹಿತ ಧಾರಾಕಾರ ಮಳೆಗೆ ಕಾಫಿಬೆಳೆಗಾರರು ಕಂಗಾಲಾಗಿದ್ದಾರೆ.
ಆಲಿಕಲ್ಲು ಮಳೆಯಿಂದ ಮನೆ ಅಂಗಳದ ತುಂಬಾ ಮಲ್ಲಿಗೆ ಹೂ ಸುರಿದಂತೆ ಭಾಸವಾಗಿದೆ. ಮಳೆ ಕಂಡು ನಗಬೇಕೋ… ಅಳಬೇಕೋ… ಸಂದಿಗ್ಧ ಸ್ಥಿತಿಯಲ್ಲಿ ಕಾಫಿ ಬೆಳೆಗಾರರಿದ್ದಾರೆ.
ಆಲಿಕಲ್ಲು ಮಳೆ ಕಾಫಿಗೆ ಭಾರೀ ಪ್ರಮಾಣದಲ್ಲಿ ಡ್ಯಾಮೇಜ್ ಸೃಷ್ಟಿಸಿದೆ. ಕಾಫಿ ಕಾಯಾಗುವ ವೇಳೆಗೆ ಆಲಿಕಲ್ಲು ಮಳೆಗೆ ಬೆಳೆ ಮೇಲೆ ಪರಿಣಾಮ ಬೀರಲಿದೆ.
ಕಾಫಿ ಮೇಲೆ ಆಲಿಕಲ್ಲು ಬಿದ್ರೆ ಕಾಫಿ ಬೀಜಕ್ಕೆ ಡ್ಯಾಮೇಜ್ ಆಗುತ್ತದೆ. ಅಲ್ಲದೇ ಕೊಳೆಯುವ ಸ್ಥಿತಿ ತಲುಪುತ್ತದೆ. ಆಲಿಕಲ್ಲು ಮಳೆ ಕಂಡು ಸಂತೋಷದ ಬದಲು ಬೆಳೆಗಾರರು ಕಣ್ಣೀರಿಡುವ ಸ್ಥಿತಿಯಲ್ಲಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಿನ್ನಡಿ, ತರುವೆ, ಬಣಕಲ್, ಅತ್ತಿಗೆರೆ, ಚಾರ್ಮಾಡಿ ಘಾಟ್, ಬಾಳೂರು ಸುತ್ತಮುತ್ತ ಮಳೆ ಅಬ್ಬರ ಕಂಡು ಬಂದಿದೆ. ಕಾಫಿನಾಡ ಕಳಸ, ಬಾಳೆಹೊನ್ನೂರು, ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: