ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಲಿದೆ! - Mahanayaka

ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಲಿದೆ!

heavy rain karnataka
25/07/2021

ಬೆಂಗಳೂರು: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯ ಆರ್ಭಟ ಮುಂದುವರಿಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಲಿದ್ದು, ಯೆಲ್ಲೋ ಅಲಾರ್ಟ್ ಘೋಷಿಸಲಾಗಿದೆ

ಮುಂದಿನ 24 ಗಂಟೆ ಅರಬ್ಬೀ ಸಮುದ್ರದಲ್ಲಿ 3.7 ಮೀಟರ್ ಎತ್ತರದ ಅಲೆಗಳು ದಡಕ್ಕೆ ಅಪ್ಪಲಿಸಲಿವೆ. ಗಾಳಿ ತೀವ್ರತೆ ಕೂಡ ಹೆಚ್ಚಾಗಿರಲಿದ್ದು, ಗಂಟೆಗೆ 40-520 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹೇಳಿರುವ ಹವಾಮಾನ ಇಲಾಖೆ, ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗಿನಿಂದ 501.6 ಮಿ.ಮೀ ಮಳೆ ಸುರಿದಿದೆ ಎಂದು ತಿಳಿಸಿದೆ.

ಪ್ರತೀ ವರ್ಷ ಸಾಮಾನ್ಯವಾಗಿ 403.8 ಮಿ.ಮೀ ಮಳೆಯಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಶೇ.24ರಷ್ಟು ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ರಾತ್ರಿ 8.30ರವರೆಗೆ 24.4 ಮಿ.ಮೀ. ಮಳೆ ದಾಖಲಾಗಿದೆ. ಹೆಚ್​ಎಎಲ್​ ಏರ್​ಪೋರ್ಟ್​​ ಒಂದರಲ್ಲೇ 16.6 ಮಿ.ಮೀ ಮಳೆ ಸುರಿದಿದೆ  ಎಂದು ತಿಳಿಸಿರು ಹವಾಮಾನ ಇಲಾಖೆ, ಮುಂದಿನ 4-5 ದಿನಗಳಲ್ಲಿ ರಾಜ್ಯು ಮುಂಗಾರು ಮಳೆ ತೀವ್ರತೆ ಕಡಿಮೆಯಾಗಲಿದೆ ಎಂದು ಹೇಳಿದೆ.

ಇನ್ನಷ್ಟು ಸುದ್ದಿಗಳು…

ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!

ಭಾರೀ ಮಳೆಗೆ 138 ಮಂದಿ ಸಾವು, 89 ಮಂದಿಗೆ ಗಂಭೀರ ಗಾಯ ನಾಪತ್ತೆಯಾದವರೆಷ್ಟು ಗೊತ್ತಾ?

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ರಾಜ್ಯ ದಲಿತ ನಾಯಕರನ್ನೂ ಸೋಲಿಸಿದ್ದು ಕಾಂಗ್ರೆಸ್ | ಕಟೀಲ್ ತಿರುಗೇಟು

ಇತ್ತೀಚಿನ ಸುದ್ದಿ