ಹಿರಿಯ ನಟ ಅಶ್ವತ್ಥ್​ ನಾರಾಯಣ್​ ಇನ್ನಿಲ್ಲ - Mahanayaka

ಹಿರಿಯ ನಟ ಅಶ್ವತ್ಥ್​ ನಾರಾಯಣ್​ ಇನ್ನಿಲ್ಲ

ashwatha narayana
07/02/2022

ಬೆಂಗಳೂರು: ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಟ ಅಶ್ವತ್ಥ್​ ನಾರಾಯಣ್​ (90) ಭಾನುವಾರ ಬೆಳಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


Provided by

ಅವರು ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಬಾಲನಟನಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಗೆ ಪದಾರ್ಪಣೆ ಮಾಡಿದ ಅಶ್ವತ್ಥ್​ ನಾರಾಯಣ್​, ‘ವಾಲ್ಮೀಕಿ’ ಮೂಲಕ ಚಿತ್ರರಂಗಕ್ಕೆ ನಟನಾಗಿ ಬಂದರು.

ತ.ರಾ.ಸು ಅವರ ಕಾದಂಬರಿ ಆಧರಿಸಿ ನಿರ್ಮಾಣವಾದ ಡಾ. ರಾಜಕುಮಾರ್​ ಅಭಿನಯದ ‘ಚಂದವಳ್ಳಿಯ ತೋಟ’ ಚಿತ್ರದಲ್ಲಿ, ಅವರು ಸುಬ್ಬಾಭಟ್ಟ ಎಂಬ ನೆಗೆಟಿವ್​ ಶೇಡ್​ ನ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ಅವರ ವೃತ್ತಿಬದುಕಿಗೆ ದೊಡ್ಡ ಮಟ್ಟದಲ್ಲಿ ತಿರುವು ಕೊಟ್ಟ ಚಿತ್ರವಾಯಿತು.ಈ ಚಿತ್ರದ ನಂತರ ಹಲವು ಚಿತ್ರಗಳಲ್ಲಿ, ಅದರಲ್ಲೂ ಡಾ. ರಾಜಕುಮಾರ್​ ಅಭಿನಯದ ಹಲವಾರು ಚಿತ್ರಗಳಲ್ಲಿ ಅಶ್ವತ್ಥ್​ ನಾರಾಯಣ್​ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಅದರಲ್ಲೂ ಬಹುತೇಕ ಚಿತ್ರಗಳಲ್ಲಿ ಅವರು ಅರ್ಚಕರಾಗಿ ನಟಿಸಿದ್ದರು. ಇತ್ತೀಚಿನ ದಿನಗಳಲ್ಲಿ ನಟನೆಯಿಂದ ದೂರವಿದ್ದರು.
ಮೃತರು ಮೂವರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹಿಜಾಬ್​ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ

ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ

ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?

ನನ್ನ ಬಟ್ಟೆ ನನ್ನ ಆಯ್ಕೆ, ನೀವ್ಯಾಕೆ ಕೇಳ್ತೀರಿ? | ನಿವೇದಿತಾ ಗೌಡ

ಹಿಜಾಬ್ ವಿವಾದ: ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ಡಾ.ಅಂಬೇಡ್ಕರ್ ನೀಡಿದ್ದಾರೆ | ಶಾಸಕಿ ಕನೀಝ್ ಫಾತಿಮ

 

ಇತ್ತೀಚಿನ ಸುದ್ದಿ