ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?

ಕುಂದಾಪುರ: ಅನಗತ್ಯ ವಿವಾದ ಹಿಜಾಬ್ ಮತ್ತು ಕೇಸರಿ ಶಾಲು ಇದೀಗ ತೀವ್ರವಾಗಿ ವೈಭವೀಕರಣಗೊಳ್ಳುತ್ತಿರುವ ನಡುವೆಯೇ, ಹಿಜಾಬ್-ಕೇಸರಿ ಶಾಲು ವಿವಾದ ಮತ್ತೆ ಮುಂದುವರಿದಿದೆ.
ಸೋಮವಾರ ಕುಂದಾಪುರದ ವೆಂಕಟರಮಣ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದ್ದಾರೆ. ಆದರೆ, ಕೇಸರಿ ಶಾಲು ಧರಿಸಿ ಕ್ಯಾಂಪಸ್ ಗೆ ಪ್ರವೇಶಿಸಲು ಯತ್ನಿಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಪ್ರವೇಶ ನಿರಾಕರಿಸಿದರು. ಕುಂದಾಪುರ ಎಸ್ ಐ ಸದಾಶಿವ ಗವರೋಜಿ ಈ ವೇಳೆ ವ್ಯದ್ಯಾರ್ಥಿಗಳಿಗೆ ತಡೆಯೊಡ್ಡಿದರು.
ಕೇಸರಿ ಶಾಲುಗಳನ್ನು ತೆಗೆದ ಬಳಿಕವೇ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕ್ಯಾಂಪಸ್ ನೊಳಗೆ ಬಿಟ್ಟರು. ಈ ವೇಳೆ ಅವರು ಹಿಜಾಬ್ ತೆಗೆದರೆ ನಾವು ಕೇಸರಿ ತೆಗೆಯುತ್ತೇವೆ ಎಂದು ವಿದ್ಯಾರ್ಥಿಗಳು ಪ್ರಾಂಶುಪಾಲರ ಜೊತೆಗೆ ವಾದ ಮಾಡಿದರು.
ಸರ್ಕಾರದ ಆದೇಶದಲ್ಲಿ ಹಿಜಾಬ್ ಹಾಗೂ ಶಾಲು ಧರಿಸುವುದು ಎರಡನ್ನೂ ನಿಷೇಧಿಸಲಾಗಿದೆ ಎಂದು ಪ್ರಾಂಶುಪಾಲ ಗಣೇಶ್ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಬಳಿಕ ವಿದ್ಯಾರ್ಥಿಗಳು ಕೇಸರಿ ಶಾಲು ತೆಗೆದು ತರಗತಿ ಪ್ರವೇಶಿಸಿದರು.
ಬೀದಿ ರಾಜಕೀಯ ಕಾಲೇಜಿಗೆ ಪ್ರವೇಶಿಸಿತೇ?
ಒಂದೆಡೆ ಹಿಜಾಬ್ ಧರಿಸಿಯೇ ನಾವು ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದ ಮುಸ್ಲಿಮ್ ವಿದ್ಯಾರ್ಥಿನಿಯರು, ಇನ್ನೊಂದೆಡೆ, ಅವರು ಹಿಜಾಬ್ ಧರಿಸಿದರೆ, ನಾವು ಕೇಸರಿ ಧರಿಸುತ್ತೇವೆ ಎನ್ನುತ್ತಿರುವ ಹಿಂದೂ ಧರ್ಮದ ವಿದ್ಯಾರ್ಥಿಗಳು ದೇಶಾದ್ಯಂತ ಮಾತ್ರವಲ್ಲ, ವಿದೇಶದಲ್ಲಿಯೂ ಸುದ್ದಿಯಾಗಿದ್ದಾರೆ. ಬೀದಿಯಲ್ಲಿದ್ದ ಹಿಜಾಬ್, ಕೇಸರಿ ಎಂಬ ಬೇಧ ಭಾವ ಕಾಲೇಜಿನೊಳಗೆ ಅದ್ಹೇಗೆ ಪ್ರವೇಶಿಸಿತೋ ಗೊತ್ತಿಲ್ಲ. ಆದರೆ, ವಿದ್ಯಾರ್ಥಿಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾಲೇಜುಗಳಲ್ಲಿಯೂ ಮತ ಬ್ಯಾಂಕ್ ಸೃಷ್ಟಿಸುವ ಹುನ್ನಾರ ಇದಾಗಿದೆಯೇ? ಈ ಎರಡೂ ತಂಡಗಳ ನಡುವೆಯೂ ರಾಜಕೀಯ ಪಕ್ಷಗಳ ತಂತ್ರಗಳಿವೆಯೇ? ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಕಾಣದ ಕೈಗಳ ಷಡ್ಯಂತ್ರಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎನ್ನುವ ಅನುಮಾನಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪಿಯುಸಿ ವಿದ್ಯಾರ್ಥಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು
ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್
ಹಿಜಾಬ್ ವಿವಾದ: ಜನರಿಗೆ ತಮ್ಮಿಷ್ಟದ ಉಡುಗೆ ತೊಡುವ ಸ್ವಾತಂತ್ರ್ಯ ಡಾ.ಅಂಬೇಡ್ಕರ್ ನೀಡಿದ್ದಾರೆ | ಶಾಸಕಿ ಕನೀಝ್ ಫಾತಿಮಾ
ಪತ್ನಿಯ ಅಧಿಕಾರ ಚಲಾಯಿಸುತ್ತಿರುವ ಗಂಡ: ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಆಕ್ರೋಶ
ಶಾಲೆ ಸರಸ್ವತಿ ಮಂದಿರ, ತಾಲಿಬಾನ್ ಮಾಡಲು ಬಿಡುವುದಿಲ್ಲ: ನಳಿನ್ ಕುಮಾರ್ ಕಟೀಲ್