ಮಗಳನ್ನೇ ಮದುವೆಯಾದ ಬ್ರಹ್ಮ, 16 ಸಾವಿರ ಮದುವೆಯಾದವರು ನಮಗೆ ದೇವರೇ? ಎಂದು ಪ್ರಶ್ನಿಸಿದ ಶಾಸಕನ ವಿರುದ್ಧ ದೂರು ದಾಖಲು - Mahanayaka
3:49 PM Thursday 12 - September 2024

ಮಗಳನ್ನೇ ಮದುವೆಯಾದ ಬ್ರಹ್ಮ, 16 ಸಾವಿರ ಮದುವೆಯಾದವರು ನಮಗೆ ದೇವರೇ? ಎಂದು ಪ್ರಶ್ನಿಸಿದ ಶಾಸಕನ ವಿರುದ್ಧ ದೂರು ದಾಖಲು

03/01/2021

ಬೆಂಗಳೂರು:  ಹಿಂದೂ ದೇವತೆಗಳ ವಿರುದ್ಧ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಶಾಸಕ, ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಗಳನ್ನೇ ಮದುವೆಯಾದ ಬ್ರಹ್ಮ, 16 ಸಾವಿರ ಮದುವೆಯಾದ ಕೃಷ್ಣ, ತಲೆಯ ಮೇಲೆ ಒಬ್ಬಳು, ತೊಡೆಯ ಮೇಲೆ ಒಬ್ಬಳನ್ನು ಇಟ್ಟುಕೊಂಡವರೆಲ್ಲ ನಮಗೆ ದೇವರೇ? ಎಂದು ಅವರು ಪ್ರಶ್ನಿದ್ದರು ಎಂದು ಆರೋಪಿಸಲಾಗಿದೆ.

ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮಗೆ ದೇವರೇ? ಹಾವು, ಹಂದಿ, ಕುದುರೆ, ಕತ್ತೆ, ನಾಯಿ, ದನ, ರತ್ನ ಪಕ್ಷಿ ದೇವಾರದರೆ ಕಾಗೆ, ಗೂಬೆ, ಬೆಕ್ಕು ಇವು ಅಪಶಕುನ. ಜರಾಸಂಧನ ಹೆಂಡತಿ ವೃಂದಾಳನ್ನು ಅತ್ಯಾಚಾರ ಮಾಡಿದ ವಿಷ್ಣು ನಮ್ಮ ದೇವರು. ಸನಾತನಿಗಳು ತಮ್ಮ ತೀಟೆಗೆ ನೂರೆಂಟು ಕಥೆ ಕಟ್ಟಿ ಸ್ತ್ರೀಯರನ್ನು ಅವಹೇಳನ ಮಾಡಲಾಗಿದೆ ಎಂದು ಮುರುಗೇಶ್ ನಿರಾಣಿ ಹೇಳಿದ್ದರು.


Provided by

ಈ ಹೇಳಿಕೆ ಸಂಬಂಧ ಇದೀಗ ಮುರುಗೇಶ್ ನಿರಾಣಿ ವಿರುದ್ಧ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿ