ಅಕ್ಕನ ಗಂಡನಿಂದಲೇ ನಾದಿಯ ಮೇಲೆ ಅತ್ಯಾಚಾರ | ವಿಡಿಯೋ ಮಾಡಿಕೊಂಡು ಬೆದರಿಕೆ - Mahanayaka
11:06 PM Thursday 13 - November 2025

ಅಕ್ಕನ ಗಂಡನಿಂದಲೇ ನಾದಿಯ ಮೇಲೆ ಅತ್ಯಾಚಾರ | ವಿಡಿಯೋ ಮಾಡಿಕೊಂಡು ಬೆದರಿಕೆ

03/01/2021

ಬಂಟ್ವಾಳ:  ಯುವತಿಯೊಬ್ಬಳನ್ನು ಆಕೆಯ ಅಕ್ಕನ ಗಂಡನೇ ಅತ್ಯಾಚಾರ ನಡೆಸಿರುವ ಘಟನೆ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿ ನಡೆದಿದ್ದು,  ಆರೋಪಿಯ ವಿರುದ್ಧ ದೂರು ದಾಖಲಾಗಿದೆ.

ಬಶೀರ್ ಎಂಬಾತನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಯುವತಿ ಹಾಗೂ ಯುವತಿಯ ತಾಯಿ ಮಾತ್ರವೇ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಆರೋಪಿ ಬಶೀರ್ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅತ್ಯಾಚಾರ ಎಸಗಿ ವಿಡಿಯೋ, ಫೋಟೋ ತೆಗೆದುಕೊಂಡಿರುವ ಬಶೀರ್, ಈ ಫೋಟೋ, ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ