ಅಜ್ಮೀರ್ ದರ್ಗಾದ ಅಡಿ ಶಿವ ಮಂದಿರ ಇದೆ: ಕೋರ್ಟ್ ಗೆ ಹಿಂದೂ ಸೇನಾದ ರಾಷ್ಟ್ರಾಧ್ಯಕ್ಷನಿಂದ ಅರ್ಜಿ
ಅಜ್ಮೀರ್ ದರ್ಗಾದ ಅಡಿ ಶಿವ ಮಂದಿರ ಇದೆ ಎಂದು ಹೇಳಿ ಹಿಂದೂ ಸೇನಾದ ರಾಷ್ಟ್ರಾಧ್ಯಕ್ಷ ವಿಷ್ಣುಗುಪ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಮತ್ತು ನ್ಯಾಯಾಲಯ ಅದನ್ನು ಸ್ವೀಕರಿಸಿ ಅಜ್ಮೀರ್ ದರ್ಗಾಕ್ಕೆ ನೋಟಿಸ್ ಕಳುಹಿಸಿರುವ ಬೆಳವಣಿಗೆಗೆ ಖ್ಯಾತ ನ್ಯಾಯವಾದಿ ಕಪಿಲ್ ಸಿಬಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೇವಲ ರಾಜಕೀಯ ಲಾಭಕ್ಕಾಗಿ ನಡೆಸಲಾಗ್ತಾ ಇರುವ ಈ ಚಟುವಟಿಕೆಗಳ ಮೂಲಕ ಈ ದೇಶವನ್ನು ನಾವು ಎಲ್ಲಿಗೆ ಕೊಂಡೊಯ್ಯುತ್ತಿದ್ದೇವೆ ಎಂದವರು ಪ್ರಶ್ನಿಸಿದ್ದಾರೆ.
ದರ್ಗಾ ಇರುವ ಜಾಗದಲ್ಲಿ ಈ ಮೊದಲು ಶಿವಮಂದಿರವಿತ್ತು ಎಂದು ಈ ಪುಸ್ತಕದಲ್ಲಿ ಬರೆಯಲಾಗಿದೆ. ಈ ಕಟ್ಟಡದಲ್ಲಿ ಮೊದಲು ಪೂಜೆ ಮತ್ತು ಜಲಾಭಿಷೇಕ ನಡೆಯುತ್ತಿತ್ತು. ದರ್ಗಾ ಇರುವ ಜಾಗದಲ್ಲಿ ಶಿವನ ಚಿತ್ರ ಇದೆ ಎಂಬುದು ಪರಂಪರಾಗತ ನಂಬಿಕೆಯಾಗಿದೆ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಅಲ್ಲಿ ಒಂದು ಬ್ರಾಹ್ಮಣ ಕುಟುಂಬ ನಿರಂತರ ಪೂಜೆಗಳನ್ನು ನಡೆಸುತ್ತಿತ್ತು. ದರ್ಗಾದ 75 ಅಡಿ ಉದ್ದವಿರುವ ಬಾಗಿಲಿನ ನಿರ್ಮಾಣಕ್ಕೆ ಮಂದಿರದ ಅವಶೇಷಗಳನ್ನು ಬಳಸಲಾಗಿದೆ. ದರ್ಗಾದ ಒಳಗಿನ ರಚನೆಗಳಲ್ಲಿ ಮಂದಿರದ ಕುರುಹುಗಳು ಇವೆ ಎಂದು ಮುಂತಾಗಿ ಈ ಪುಸ್ತಕದಲ್ಲಿ ಬರೆಯಲಾಗಿದೆ.
ಹಿಂದೂಸೇನಾದ ಅಧ್ಯಕ್ಷ ವಿಷ್ಣು ಗುಪ್ತ ಇದೀಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj