“ಹಿಂದೂ ದೇವಾಲಯಗಳ ನಿಯಂತ್ರಣ ಹಿಂದೂಗಳ ಕೈಯಲ್ಲೇ ಇರಬೇಕು!”

ತಿರುಪತಿ: ಹಿಂದೂ ದೇವಾಲಯಗಳ ನಿಯಂತ್ರಣ ಹಿಂದೂಗಳ ಕೈಯಲ್ಲೇ ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯ ಮಾಡಿದ್ದು, ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ ಘಟನೆಯ ಬಳಿಕ ವಿಹೆಚ್ ಪಿ ಈ ಬೇಡಿಕೆಯಿಟ್ಟಿದೆ.
ಬೇರೆ ಎಲ್ಲ ಧರ್ಮಗಳ ಪ್ರಾರ್ಥನಾ ಮಂದಿರ ಆಯಾ ಸಮಾಜದವರ ಅಧೀನದಲ್ಲೇ ಇದೆ. ಹೀಗಿರುವಾಗ, ಹಿಂದೂ ದೇವಾಲಯಗಳಿಗೆ ಮಾತ್ರ ಸರ್ಕಾರದ ನಿಯಂತ್ರಣ ಏಕಿದೆ ಅಂತ ಹಿಂದೂ ಸಂಘಟನೆಗಳು ಪ್ರಶ್ನಿಸುತ್ತಿವೆ.
ಸರ್ಕಾರದ ನಿಯಂತ್ರಣಗಳಿಂದಲೇ ಇಂತಹ ಎಡವಟ್ಟುಗಳು ನಡೆಯುತ್ತಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ನಿಲ್ಲಬೇಕು. ಹಿಂದೂ ಸಮಾಜದವರೇ ಆಯಾ ದೇವಾಲಯಗಳ ಆಡಳಿತ ನೋಡಿಕೊಳ್ಳುವಂತಾಗಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj