ಬೇಸಿಗೆ ಕಾಲದಲ್ಲಿ ಹೆಚ್ಚು ನೀರು ಕುಡಿಯುವುದು ಎಷ್ಟು ಮುಖ್ಯ? - Mahanayaka

ಬೇಸಿಗೆ ಕಾಲದಲ್ಲಿ ಹೆಚ್ಚು ನೀರು ಕುಡಿಯುವುದು ಎಷ್ಟು ಮುಖ್ಯ?

drinking water
24/02/2025


Provided by

ಬೇಸಿಗೆ ಕಾಲದಲ್ಲಿ ಹೆಚ್ಚು ನೀರು ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಸಾಕಷ್ಟು ಜನರು ಕಡಿಮೆ  ನೀರು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಇನ್ನು ಕೆಲವರು ಬಾಯಾರಿದರೂ, ದಣಿದರೂ ನೀರು ಕುಡಿಯುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾರೆ.  ಬೇಸಿಗೆ ಕಾಲದಲ್ಲಿ ನೀರು ಹೆಚ್ಚು ಕುಡಿಯುವುದು ಬಹಳ ಮುಖ್ಯವಾಗಿರುತ್ತದೆ, ಅದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ…


Provided by

ನಿರ್ಜಲೀಕರಣ ತಡೆ:

ಬೇಸಿಗೆಯಲ್ಲಿ ಬಿಸಲಿನ ತಾಪಕ್ಕೆ ದೇಹ ಹೆಚ್ಚು ಬೆವರುತ್ತದೆ. ಈ ಸಂದರ್ಭದಲ್ಲಿ ನೀರು ಅಥವಾ ಯಾವುದೇ ದ್ರವ ಪದಾರ್ಥ ಸೇವನೆ ಮಾಡದೇ ಇದ್ದರೆ, ತಲೆ ತಿರುಗುವುದು, ಆಯಾಸವಾಗುವುದು, ತಲೆನೋವು ಕಾಣಿಸಿಕೊಳ್ಳುವುದು ಮತ್ತು ತೀವ್ರ ಬಳಲಿಕೆ ಕಂಡುಬರಬಹುದು.


Provided by

ದೇಹದ ಉಷ್ಣತೆ ಕಾಪಾಡುತ್ತದೆ:

ಬೇಸಿಗೆಯಲ್ಲಿ ನಿಮ್ಮ ದೇಹದ ತಾಪಮಾನವನ್ನು ಕಾಪಾಡಲು ನೀರು ಸಹಾಯ ಮಾಡುತ್ತದೆ. ನೀರಿನ ಪ್ರಮಾಣ ಅಧಿಕವಿದ್ದರೆ, ನಿಮ್ಮ ದೇಹದ ಶಾಖವನ್ನು ನಿಯಂತ್ರಿಸಲು ಸಹಕಾರವಾಗುತ್ತದೆ. ಹಾಗಾಗಿ ನೀರು ಕುಡಿಯುವುದು ಅಗತ್ಯವಾಗಿದೆ. ನೀರು ಕುಡಿಯದೇ ಇದ್ದರೆ, ನಿಮ್ಮ ದೇಹ ಶಾಖವನ್ನು ನಿಯಂತ್ರಿಸಲು ಹೆಣಗಾಡುತ್ತದೆ. ಇದರಿಂದ ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳು ಕಾಣಿಸಿಕೊಳ್ಳಬಹುದು.

ಶಕ್ತಿ ಹೆಚ್ಚಿಸುತ್ತದೆ:

ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ನಿರ್ಜಲೀಕರಣ ದೂರವಾಗಿ ಶಕ್ತಿಯ ಮಟ್ಟ ಹೆಚ್ಚುತ್ತದೆ. ದೇಹದ ದಣಿವನ್ನು ತಡೆಯಲು ನೀರು ಅತ್ಯಗತ್ಯವಾಗಿದೆ.

ಚರ್ಮದ ಆರೋಗ್ಯ ಕಾಪಾಡುತ್ತದೆ:

ಬಿಸಿ ವಾತಾವರಣವು ನಿಮ್ಮ ಚರ್ಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ದೇಹಕ್ಕೆ ಅಗತ್ಯವಿರುವಷ್ಟು ನೀರು ಸೇವನೆ ಮಾಡಿದರೆ, ನಿಮ್ಮ ಚರ್ಮದಲ್ಲಿ ತೇವಾಂಶ ಇರುತ್ತದೆ ಮತ್ತು ಶುಷ್ಕತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ನೀರು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ, ನೀರು ಕುಡಿಯುವುದರಿಂದ ಮಲಬದ್ಧತೆಯನ್ನು ಕೂಡ ತಡೆಯಬಹುದು, ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ನೀರು ಸಹಕಾರಿಯಾಗಿದೆ.  ಅಲ್ಲದೇ ಮೂತ್ರ ಮತ್ತು ಬೆವರಿನ ಮೂಲಕ ದೇಹದ ವಿಷವನ್ನು ಹೊರ ಹಾಕಲು ನೀರು ಸಹಾಯ ಮಾಡುತ್ತದೆ. ನಿಮ್ಮ ಮೂತ್ರಪಿಂಡ ಹಾಗೂ ಇತರ ಅಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.

ನೀರು ಕುಡಿಯುವುದು ಮಾತ್ರವಲ್ಲದೇ, ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆಗಳಂತ ಹಣ್ಣುಗಳು ಮತ್ತು ನೀರಿನ ಅಂಶಗಳಿರುವ ತರಕಾರಿಗಳನ್ನು ಬೇಸಿಗೆ ಕಾಲದಲ್ಲಿ ಹೆಚ್ಚು ಸೇವಿಸುವುದು ಉತ್ತಮ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ