HMPV: ಏನಿದು ಎಚ್.ಎಂ.ಪಿ.ವಿ. ವೈರಸ್? ಇದರ ಲಕ್ಷಣಗಳೇನು? - Mahanayaka

HMPV: ಏನಿದು ಎಚ್.ಎಂ.ಪಿ.ವಿ. ವೈರಸ್? ಇದರ ಲಕ್ಷಣಗಳೇನು?

HMPV
06/01/2025

ಜಗತ್ತಿನಾದ್ಯಂತ ಮತ್ತೊಂದು ಸಾಂಕ್ರಾಮಿಕ ರೋಗ ಹ್ಯೂಮನ್ ಮೆಟಾನ್ಯೂಮೊ ವೈರಸ್(HMPV) ಆತಂಕ, ಗೊಂದಲಗಳನ್ನು ಹುಟ್ಟು ಹಾಕಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಮಗುವೊಂದಕ್ಕೆ ಈ ವೈರಸ್ ಇರುವುದು ದೃಢಪಟ್ಟ ಹಿನ್ನೆಲೆ ಸಾಕಷ್ಟು ಜನರು ಮಾಹಿತಿಯ ಕೊರತೆಯಿಂದ ಆತಂಕಕ್ಕೀಡಾಗಿದ್ದಾರೆ. ಅಷ್ಟಕ್ಕೂ ಈ ವೈರಸ್ ಏನು? ಇದರ ಲಕ್ಷಣಗಳೇನು? ಇದು ಅಪಾಯಕಾರಿಯೇ ಎನ್ನುವುದನ್ನು ತಿಳಿದುಕೊಳ್ಳೋಣ…

ಹ್ಯೂಮನ್ ಮೆಟಾನ್ಯೂಮೊ ವೈರಸ್(HMPV) ಉಸಿರಾಟಕ್ಕೆ ಸಂಬಂಧಿಸಿದ ವೈರಸ್ ಆಗಿದ್ದು,ಇದು ಜ್ವರದಂತಹ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ. ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಈ ವೈರಸ್ ಹೆಚ್ಚು ಕಾಣಿಸಿಕೊಳ್ಳುತ್ತದೆ.


ADS

HMPVಯ ಲಕ್ಷಣಗಳು:

* ಕೆಮ್ಮು
* ಮೂಗು ಸೋರುವುದು ಅಥವಾ ಮೂಗು ಕಟ್ಟುವುದು
* ಗಂಟಲು ನೋವು
* ಜ್ವರ

ಕೆಲವೊಂದು ಸಂದರ್ಭಗಳಲ್ಲಿ HMPV ಹೆಚ್ಚು ತೀವ್ರವಾದ ಅನಾರೋಗ್ಯಕ್ಕೆ ಕಾರಣವಾಗಬಹುದು. ಅದರ ಲಕ್ಷಣಗಳು ಈ ಕೆಳಗಿನಂತಿವೆ:
* ಉಬ್ಬಸ
* ಉಸಿರಾಟದ ತೊಂದರೆ
* ಒರಟುತನ
* ನ್ಯೂಮೋನಿಯಾ
* ವಯಸ್ಕರಲ್ಲಿ ಆಸ್ತಮಾದ ಉಲ್ಬಣ.
* 1ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, ವಯಸ್ಸಾದ ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರಲ್ಲಿ HMPV ಗಂಭೀರವಾದ ಉಸಿರಾಟ ಕಾಯಿಲೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

ಯಾರಿಗೆ ಅಪಾಯಕಾರಿ?:

ಚಿಕ್ಕಮಕ್ಕಳು, ವೃದ್ಧರು, ರೋಗನಿರೋಧ ಶಕ್ತಿ ಕಡಿಮೆ ಇರುವವರಿಗೆ ಈ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಶೇ 5—16 ನ್ಯುಮೋನಿಯಾದಂತಹ ಉಸಿರಾಟದ ಸಮಸ್ಯೆಗಳನ್ನು ಹೆಚ್ಚಿಸಬಹುದು.

HMPV ವೈರಸ್ ಪತ್ತೆ:

ಬೆಂಗಳೂರಿನಲ್ಲಿ ಪತ್ತೆಯಾದ HMPV ವೈರಸ್ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, HMPV ವೈರಸ್ ಭಾರತದಲ್ಲಿ ಕೂಡ ಇದೆ. ಆದರೆ ಅದು ಮ್ಯುಟೇಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ ಎಂದಿದ್ದಾರೆ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎನ್ನುವುದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯೇ ಎಂಬ ಬಗ್ಗೆ ಗೊಂದಲ ಇದೆ. ಭಾರತದಲ್ಲೂ HMPV ವೈರಸ್ ಶೇ.0.78ರಷ್ಟು ಕಾಣಿಸಿಕೊಳ್ಳುತ್ತದೆ ಎಂದು ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ