ತರುವೆ ಗ್ರಾಮದಲ್ಲಿ ಕಾಡ್ಗಿಚ್ಚಿ: ಅಪಾರ ಪ್ರಮಾಣದ ಹುಲ್ಲುಗಾವಲು ಹಾಗೂ ಜೀವಜಾಲ ಭಸ್ಮ - Mahanayaka

ತರುವೆ ಗ್ರಾಮದಲ್ಲಿ ಕಾಡ್ಗಿಚ್ಚಿ: ಅಪಾರ ಪ್ರಮಾಣದ ಹುಲ್ಲುಗಾವಲು ಹಾಗೂ ಜೀವಜಾಲ ಭಸ್ಮ

chikkamagaluru
04/03/2025


Provided by

ಚಿಕ್ಕಮಗಳೂರು: ತರುವೆ ಗ್ರಾಮದ ಕುಂಟುಗುಡು ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಕಾಡ್ಗಿಚ್ಚಿಯಿಂದ ಅಪಾರ ಪ್ರಮಾಣದ ಹುಲ್ಲುಗಾವಲು ಹಾಗೂ ಕುರುಚಲು ಕಾಡು ಭಸ್ಮವಾಗಿರುವ ಘಟನೆ ನಡೆದಿದೆ.


Provided by

ಸ್ಥಳೀಯ ಮಾಹಿತಿ ಪ್ರಕಾರ, ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ಇದರಿಂದ ಸತ್ಯ ಸಂಕುಲ (ಪ್ಲೋರಾ) ಹಾಗೂ ಸೂಕ್ಷ್ಮ ಜೀವಿಗಳು (ಫೌನಾ) ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಮಲೆನಾಡಿನ ಈ ಪ್ರದೇಶದಲ್ಲಿ ಇತ್ತೀಚೆಗೆ ತೀವ್ರ ತಾಪಮಾನ ಮತ್ತು ಬಿಸಿಗಾಳಿಯಿದ್ದರಿಂದ ಬೆಂಕಿ ತೀವ್ರವಾಗಿ ಹಬ್ಬಿ, ನಿಯಂತ್ರಣಕ್ಕೆ ತರಲು ಗ್ರಾಮಸ್ಥರು ಹರಸಾಹಸಪಟ್ಟರು.

ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸಲು ಶ್ರಮಪಟ್ಟರೂ, ಹೆಚ್ಚಿನ ಪ್ರದೇಶ ಸುಟ್ಟುಹೋಗಿದ್ದು, ಪರಿಸರಕ್ಕೆ ಅಪಾರ ಹಾನಿಯಾಗಿದೆ. ಈ ಘಟನೆ ಬಗ್ಗೆ ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


Provided by

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ