ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ: ಯತ್ನಾಳ್ ಮತ್ತೆ ವಾಗ್ದಾಳಿ - Mahanayaka
6:33 PM Thursday 6 - February 2025

ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ: ಯತ್ನಾಳ್ ಮತ್ತೆ ವಾಗ್ದಾಳಿ

yathnal
30/01/2025

ಬೆಂಗಳೂರು: ವಿಜಯೇಂದ್ರ ಚಡ್ಡಿ ಹಾಕುವ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ  ಮಾತನಾಡಿದ ಅವರು, ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿ, ವಿಜಯೇಂದ್ರ ವಿರುದ್ಧ ಸಂಸದ ಸುಧಾಕರ್ ನೀಡಿದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು.

ಸಂಸದ ಸುಧಾಕರ್ ಮಾತ್ರವಲ್ಲ ರಾಜ್ಯದ ಹಿರಿಯ ನಾಯಕರಿಗೆ  ಜಿಲ್ಲಾ ಅಧ್ಯಕ್ಷರ ಆಯ್ಕೆ ಬಗ್ಗೆ ಅಸಮಾಧಾನ ಇದೆ. ಇದೇನು ಪ್ರೈವೆಟ್ ಕಂಪೆನಿಯಾ? ಎಲ್ಲ ನೀವೇ ಮಾಡಿಕೊಳ್ಳೋದಾದ್ರೆ, ಅಣ್ಣ ಕೇಂದ್ರ ಮಂತ್ರಿಯಾಗಲಿ, ನಿಮ್ಮ ಅಪ್ಪ ರಾಷ್ಟ್ರಪತಿ ಆಗ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ, ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡಿ ಹಾಕುವ ಮುನ್ನ  ಪಕ್ಷ ಸಂಘಟನೆ ಮಾಡಿದ್ದೇವೆ. ಈ ಬಚ್ಚಾನಿಂದ ನಾವು ಕಲಿಯಬೇಕಿಲ್ಲ, ನಮಗೆ ಯಾವ ಭಯವೂ ಇಲ್ಲ, ಪಕ್ಷದಿಂದ ತೆಗೆದು ಹಾಕ್ತೀರಾ? ಹಾಕಲಿ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ