ಶಾಲೆಯ ಕ್ರೀಡಾಂಗಣದಲ್ಲೇ ಖಾಸಗಿ ವ್ಯಕ್ತಿಯ ಮನೆಗೆ ರಸ್ತೆ: ಜೆಸಿಬಿಗೆ ಅಡ್ಡ ನಿಂತ ಮಕ್ಕಳು, ಪೋಷಕರು

ಚಿಕ್ಕಮಗಳೂರು: ಖಾಸಗಿ ವ್ಯಕ್ತಿಯೊಬ್ಬರ ಮನೆಯ ಗೃಹಪ್ರವೇಶಕ್ಕಾಗಿ ಶಾಲಾ ಕ್ರೀಡಾಂಗಣದಲ್ಲಿ ರಸ್ತೆ ಮಾಡಿದ ಹಿನ್ನೆಲೆ ಪೋಷಕರು, ಶಾಲಾ ಮಕ್ಕಳು ಜೆಸಿಬಿಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದ ಘಟನೆ ಕಡೂರು ತಾಲೂಕಿನ ಚೌಳ ಹಿರಿಯೂರು ಸಮೀಪದ ಹಡಗಲು ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತನ ಮನೆ ಗೃಹಪ್ರವೇಶಕ್ಕೆ ಶಾಲಾ ಆವರಣದಲ್ಲಿ ರಸ್ತೆ ಮಾಡಲು ಯತ್ನಿಸಲಾಗಿದೆ. ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು, ಪೋಷಕರ ವಿರೋಧದ ವೇಳೆ ವಿಲೇಜ್ ಅಕೌಂಟೆಂಟ್ ಸ್ಥಳದಲ್ಲಿ ನಿಂತು ರಸ್ತೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಸಾರ್ವಜನಿಕರು ಶಾಲೆ ಒಡೆದು ಹಾಕಿ, ಗ್ರೌಂಡ್ ನಲ್ಲಿ ರಸ್ತೆ ಮಾಡಿ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಫೆಬ್ರವರಿ 6 ರಂದು ನಡೆಯಲಿರುವ ಪ್ರಮೋದ್ ಎಂಬುವರ ಮನೆ ಗೃಹಪ್ರವೇಶ ನಡೆಯಲಿದೆ. ಸರ್ಕಾರಿ ಶಾಲೆಯ ಕ್ರೀಡಾಂಗಣಕ್ಕೆಂದು 18 ಗುಂಟೆ ಗೋಮಾಳ ಜಾಗ ಮೀಸಲಿಡಲಾಗಿದೆ. ಈ ಸ್ಥಳದಿಂದಲೇ ರಸ್ತೆ ನಿರ್ಮಾಣಕ್ಕೆ ಯತ್ನಿಸಲಾಗಿದೆ.
ಮನೆಗಳಿಗೆ ಬೇರೆ ದಾರಿ ಇದ್ರು, ಕ್ರೀಡಾಂಗಣದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಸಾರ್ವಜನಿಕರ ಹಿತ ಕಾಯಬೇಕಾದ ಅಧಿಕಾರಿಗಳು ಖಾಸಗಿ ವ್ಯಕ್ತಿಯ ಪರವಾಗಿ ನಿಂತಿರುವುದು ಅಚ್ಚರಿಗೆ ಕಾರಣವಾಯ್ತು.
ಕಡೂರು ಶಾಸಕ ಆನಂದ್ ಆಪ್ತರಾಗಿರುವ ಕಾರಣಕ್ಕೆ ಖಾಸಗಿ ವ್ಯಕ್ತಿಯ ಕಾನೂನು ಬಾಹಿರ ಕೆಲಸಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: