ಬೀದಿ ನಾಯಿ ಕಚ್ಚಿದರೆ ಸರ್ಕಾರ ಸಂತ್ರಸ್ತರಿಗೆ 10 ಸಾವಿರ ಪರಿಹಾರ ನೀಡಬೇಕು: ಕೋರ್ಟ್ ತೀರ್ಪು! - Mahanayaka

ಬೀದಿ ನಾಯಿ ಕಚ್ಚಿದರೆ ಸರ್ಕಾರ ಸಂತ್ರಸ್ತರಿಗೆ 10 ಸಾವಿರ ಪರಿಹಾರ ನೀಡಬೇಕು: ಕೋರ್ಟ್ ತೀರ್ಪು!

dog 2
15/11/2023

ನವದೆಹಲಿ: ಬೀದಿ ನಾಯಿ ಒಂದು ಬಾರಿ ಕಚ್ಚಿದರೆ, ಸಂತ್ರಸ್ತನಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.


Provided by

ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ರಾಜ್ಯ ಸರ್ಕಾರ ಪರಿಹಾರ ನೀಡಲು ಪ್ರಾಥಮಿಕ ಜವಾಬ್ದಾರವಾಗಿದೆ ಎಂದು ಕೋರ್ಟ್‌ ತಿಳಿಸಿದೆ.

ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹೈಕೋರ್ಟ್ ನ ಮಹತ್ವದ ಆದೇಶದಲ್ಲಿ ಪ್ರತಿ ಹಲ್ಲಿನ ಗುರುತಿಗೆ ಕನಿಷ್ಠ 10,000 ರೂ. ಮತ್ತು 0.2 ಸೆಂ.ಮೀ ಗಾಯಕ್ಕೆ ಕನಿಷ್ಠ 20,000 ರೂ. ಪರಿಹಾರ ಧನ ನೀಡಬೇಕೆಂದು ಹೇಳಿದೆ.

ಪರಿಹಾರವನ್ನು ನಿರ್ಧರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢಕ್ಕೆ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರ ನ್ಯಾಯಪೀಠ ಆದೇಶಿಸಿದೆ.

ಇತ್ತೀಚಿನ ಸುದ್ದಿ