ಇಲಾಖೆಯ ಪೂರ್ವಾನುಮತಿ ಇಲ್ಲದೆ ವಿದೇಶ ಪ್ರಯಾಣ: ಇನ್‌ಸ್ಪೆಕ್ಟರ್‌ ಅಮಾನತು - Mahanayaka
10:45 AM Friday 14 - February 2025

ಇಲಾಖೆಯ ಪೂರ್ವಾನುಮತಿ ಇಲ್ಲದೆ ವಿದೇಶ ಪ್ರಯಾಣ: ಇನ್‌ಸ್ಪೆಕ್ಟರ್‌ ಅಮಾನತು

sharif
23/03/2022

ಮಂಗಳೂರು: ಇಲಾಖೆಯ ಪೂರ್ವಾನುಮತಿ ಇಲ್ಲದೆ ಹಾಗೂ ಹಿರಿಯ ಪೊಲೀಸ್ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಿದ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್‌ವೋರ್ವರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಮಹಮ್ಮದ್ ಶರೀಫ್ ಸೇವೆಯಿಂದ ಅಮಾನತು ಆದ ಇನ್‌ಸ್ಪೆಕ್ಟರ್‌. ಮಹಮ್ಮದ್ ಶರೀಫ್ ಅವರು ತನ್ನ ಊರಿನ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಇರುವುದರಿಂದ ಮಾ.16ರಿಂದ 19ರ ವರೆಗೆ ರಜೆ ಪಡೆದಿದ್ದರು. ‌ಅಲ್ಲದೆ, ಮಾ. 20ರಂದು ಹೆಚ್ಚುವರಿ ರಜೆಯನ್ನು ಪಡೆದುಕೊಂಡಿದ್ದರು. ಆದರೆ ಈ ಅವಧಿಯಲ್ಲಿ ಶರೀಫ್ ಇಲಾಖೆಗೆ ಮಾಹಿತಿ ನೀಡದೆ ದುಬೈಗೆ ಪ್ರಯಾಣಿಸಿರುವುದು ದೃಢಪಟ್ಟಿದೆ.

ಪೊಲೀಸ್ ಇಲಾಖೆಯ ಕಾನೂನು ಉಲ್ಲ‌ಂಘಿಸಿರುವುದ್ದಕ್ಕಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮಹಮ್ಮದ್ ಶರೀಫ್ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಕರ್ತವ್ಯದಿಂದ ಮುಂದಿನ ಆದೇಶ ತನಕ ಅಮಾನತು ಮಾಡಿ ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಆದೇಶ ನೀಡಿದ್ದಾರೆ. ‌

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಲಿತ ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಆ್ಯಸಿಡ್​​ನಿಂದ ಹಣೆ ಮೇಲೆ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಉ.ಪ್ರ. ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

ಟಿಂಬರ್ ಗೋದಾಮಿನಲ್ಲಿ ಭಾರೀ ಅಗ್ನಿ ಅನಾಹುತ: 11 ಮಂದಿ ಸಜೀವ ದಹನ

ಉತ್ತರ ಪ್ರದೇಶ: ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ

ಇತ್ತೀಚಿನ ಸುದ್ದಿ