ಮದ್ದುಗುಂಡು ಉತ್ಪಾದನೆಯಲ್ಲಿ ಭಾರತ ಶೇ.88ರಷ್ಟು ಸ್ವಾವಲಂಬನೆ ಸಾಧಿಸಿದೆ: ರಕ್ಷಣಾ ಸಚಿವರ ಹೇಳಿಕೆ

2023-24ರಲ್ಲಿ ಭಾರತದ ರಕ್ಷಣಾ ರಫ್ತು 23,000 ಕೋಟಿ ರೂ.ಗೆ ತಲುಪಿದೆ. ಅಲ್ಲದೇ ಮದ್ದುಗುಂಡು ಉತ್ಪಾದನೆಯಲ್ಲಿ ದೇಶವು ಶೇಕಡಾ 88 ರಷ್ಟು ಸ್ವಾವಲಂಬನೆ ಸಾಧಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಮತ್ತಷ್ಟು ದಾಪುಗಾಲು ಹಾಕುತ್ತಿರುವ ಬಗ್ಗೆ ವಿವರಿಸಿದ ಅವರು, 2029ರ ವೇಳೆಗೆ ಭಾರತವು 50,000 ಕೋಟಿ ರೂ.ಗಳ ಗುರಿಯನ್ನು ತಲುಪುವ ಗುರಿ ಹೊಂದಿದೆ ಎಂದಿದ್ದಾರೆ.
ಐಐಟಿ ಮಂಡಿಯ 16 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ರಾಜನಾಥ್ ಸಿಂಗ್, ಅಲ್ಲಿ ಅವರು ಎಐ ಯುದ್ಧ, ಸೈಬರ್ ಭದ್ರತೆ, ಸ್ಥಳೀಯ ಎಐ ಚಿಪ್ ಉತ್ಪಾದನೆ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಹೆಚ್ಚಿನ ತಾಂತ್ರಿಕ ಪ್ರಗತಿಯನ್ನು ಪ್ರೋತ್ಸಾಹಿಸಿದರು. ಐಐಟಿ ಮಂಡಿ ಮತ್ತು ಇತರ ಸಂಸ್ಥೆಗಳು ಈ ನಿರ್ಣಾಯಕ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಪ್ರಗತಿಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ಐಐಟಿ (ಪ್ರಾರಂಭಿಸಿ, ಸುಧಾರಿಸಿ ಮತ್ತು ಪರಿವರ್ತಿಸಿ) ಮಂತ್ರವನ್ನು ಆಳವಡಿಸಿಕೊಳ್ಳುವ ಮೂಲಕ 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂಬ ಭಾರತದ ಆಕಾಂಕ್ಷೆಯನ್ನು ಸುಗಮಗೊಳಿಸಲು ತಂತ್ರಜ್ಞಾನ ನಾವೀನ್ಯತೆಯನ್ನು ಆಳವಡಿಸಿಕೊಳ್ಳುವಂತೆ ಸಚಿವರು ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj