ಕೊರೊನಾ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ | ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಭಾರತ ಸರ್ಕಾರವು ಬಡವರಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಬಡವರ ಆರೋಗ್ಯ ಮತ್ತು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೇವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಾಷ್ಟ್ರದ ಹೋರಾಟದಲ್ಲಿ ಬಡವರಿಗೆ ಆದ್ಯತೆ ನೀಡುವ ತನ್ನ ಸರ್ಕಾರದ ಕಾರ್ಯತಂತ್ರದ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಕಾಣಿಸಿಕೊಂಡ ಬಿಕ್ಕಟ್ಟನ್ನು ಎದುರಿಸುವ ತನ್ನ ಕಾರ್ಯತಂತ್ರದಲ್ಲಿ ಭಾರತ ಬಡವರಿಗೆ ಮೊದಲ ಆದ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಥವಾ ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಆಗಿರಲಿ, ನಾವು ಮೊದಲ ದಿನದಿಂದಲೇ ಬಡವರ ಆಹಾರ ಮತ್ತು ಉದ್ಯೋಗದ ಬಗ್ಗೆ ಯೋಚಿಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ 80 ಕೋಟಿ ಭಾರತೀಯರು ಸರ್ಕಾರದ ವತಿಯಿಂದ ಉಚಿತ ಪಡಿತರವನ್ನು ಪಡೆದಿದ್ದಾರೆ. ಕೇವಲ ಗೋಧಿ, ಅಕ್ಕಿ ಅಥವಾ ದ್ವಿದಳ ಧಾನ್ಯಗಳು ಮಾತ್ರವಲ್ಲದೆ 8 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಲಾಕ್ ಡೌನ್ ಸಮಯದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಗಳನ್ನು ಸಹ ನೀಡಲಾಯಿತು. 20 ಕೋಟಿಗೂ ಹೆಚ್ಚು ಮಹಿಳೆಯರು ತಮ್ಮ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ರೂ.30,000 ಕೋಟಿಗಳನ್ನು ಪಡೆದಿದ್ದಾರೆ ಎಂದು ಮೋದಿ ತಿಳಿಸಿದರು.
ಇನ್ನಷ್ಟು ಸುದ್ದಿಗಳು…
ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!
ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್
3ನೇ ಅಲೆಗೆ ಸೆಡ್ಡು ಹೊಡೆಯಲು ಸಿಂಗಲ್ ಡೋಸ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಕೇಂದ್ರ ಸರ್ಕಾರ
ಕೇಳಿದ ಖಾತೆ ಸಿಗಲಿಲ್ಲ ಎಂದಾದರೆ, ರಾಜೀನಾಮೆ ನೀಡಬೇಕಾಗುತ್ತದೆ | ಆನಂದ್ ಸಿಂಗ್
ವಿಡಿಯೋ ಕಾಲ್ ನಲ್ಲೇ ಕೊಲೆಗೆ ಟ್ರೈನಿಂಗ್ ನೀಡಿದ ಪ್ರಿಯಕರ: ಅಮ್ಮನನ್ನೇ ಕೊಂದ ಬಾಲಕಿ