ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ನ ಮೃತದೇಹ ಪತ್ತೆ - Mahanayaka

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ನ ಮೃತದೇಹ ಪತ್ತೆ

mohammed abdul arfath
09/04/2024


Provided by

ನವದೆಹಲಿ: ಅಮೆರಿಕದಲ್ಲಿ ಕಳೆದ ಮೂರು ವಾರಗಳಿಂದ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೊಹಮ್ಮದ್ ಅಬ್ದುಲ್ ಅರ್ಫಾತ್ ನ ಮೃತದೇಹ ಇಂದು ಬೆಳಗ್ಗೆ ಓಹಿಯೋದ ಕ್ಲೀವ್ ಲ್ಯಾಂಡ್ ನಲ್ಲಿ ಪತ್ತೆಯಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಮಾರ್ಚ್ 7ರಂದು ಭಾರತದ ಹೈದರಾಬಾದ್ ಮೂಲದ ಮೊಹಮ್ಮದ್ ಅಬ್ದುಲ್ ಅರ್ಫಾತ್ ಕೊನೆಯ ಬಾರಿ ತನ್ನ ತಂದೆಯ ಜೊತೆಗೆ ಮಾತನಾಡಿದ್ದ. ಆ ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಅರ್ಫಾತ್ ನ ತಂದೆ ಮೊಹಮ್ಮದ್ ಸಲೀಂ ಹೇಳಿದ್ದಾರೆ.

ಮಾರ್ಚ್ 19ರಂದು ನನಗೆ ಅಪರಿಚಿತರ ಕರೆ ಮಾಡಿ ನಿನ್ನ ಮಗನನ್ನು ಅಪಹರಿಸಿದ್ದೇವೆ. ಆತನನ್ನು ಬಿಡುಗಡೆ ಮಾಡಬೇಕಾದರೆ 1,200 ಡಾಲರ್ ನೀಡುವಂತೆ ಹೇಳಿದರು. ಆದರೆ ಹಣವನ್ನು ಹೇಗೆ ಪಾವತಿ ಮಾಡಬೇಕು ಎಂದು ಅವರು ಹೇಳಿರಲಿಲ್ಲ. ಮತ್ತೊಮ್ಮೆ ಮಗನ ಜೊತೆಗೆ ತಾನು ಮಾತನಾಡುತ್ತೇನೆ ಎಂದಾಗ ಅಪಹರಣಕಾರರು ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಸಲೀಂ ಪಿಟಿಐಗೆ ತಿಳಿಸಿದ್ದಾರೆ.

ಅರ್ಫಾತ್ ನನ್ನು ಡ್ರಗ್ಸ್ ಮಾರಾಟ ಮಾಡುವ ಗ್ಯಾಂಗ್ ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಇದೀಗ ತನಿಖೆ ನಡೆಸಲು ಭಾರತೀಯ ರಾಯಭಾರ ಕಚೇರಿ ಏಜೆನ್ಸಿಗಳ ಸಂಪರ್ಕದಲ್ಲಿದೆ. ಸದ್ಯ ಅರ್ಫಾತ್ ನ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದೆ.

ಈ ವರ್ಷದಲ್ಲಿ ಅಮೆರಿಕದಲ್ಲಿ ಹಲವಾರು ಭಾರತೀಯರು ಹಾಗೂ ಭಾರತೀಯ ಮೂಲದ ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದು ಅಮೆರಿಕದಲ್ಲಿ ವಾಸವಿರುವ ಭಾರತೀಯ ಮೂಲದ ಪ್ರಜೆಗಳಿಗೆ ಆತಂಕವನ್ನುಂಟು ಮಾಡಿದೆ.

ಇತ್ತೀಚೆಗೆ 25 ವರ್ಷದ ವಯಸ್ಸಿನ ವಿವೇಕ್ ಸೈನಿಯನ್ನು ಮಾದಕ ವ್ಯಸನಿಗಳು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ್ದರು. 27 ವರ್ಷದ ವೆಂಕಟರಮಣ ಪಿಟ್ಟಲ ಎಂಬವರು ಜಲನೌಕೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇನ್ನೂ ಹಲವು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವಿಗೆ ಕಾರಣಗಳು ಇನ್ನೂ ದೃಢಪಟ್ಟಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ