ಫೆಲೆಸ್ತೀನಿಗೆ ಭಾರತದ ಬೆಂಬಲ: ಪ್ರಧಾನಿ ನರೇಂದ್ರ ಮೋದಿ ಮತ್ತೆ ಸ್ಪಷ್ಟನೆ
ಫೆಲೆಸ್ತೀನಿಗೆ ಭಾರತದ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಫೆಲೆಸ್ತೀನಿ ಯರಿಗಾಗಿ ಐಕ್ಯ ಭಾವವನ್ನು ಪ್ರದರ್ಶಿಸುವ ಅಂತಾರಾಷ್ಟ್ರೀಯ ದಿನದ ಭಾಗವಾಗಿ ಕಳುಹಿಸಲಾದ ಪತ್ರದಲ್ಲಿ ಅವರು ಈ ಬೆಂಬಲವನ್ನು ಪುನರಾವರ್ತಿಸಿದ್ದಾರೆ. ಫೆಲೆಸ್ತೀನಿಯರ ಸುರಕ್ಷಿತತೆ ಮತ್ತು ಅವರು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳಿಗೆ ಪ್ರಧಾನಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಯುದ್ಧ ಕೊನೆಗೊಳ್ಳಬೇಕು, ಒತ್ತೆಯಾಳುಗಳ ಬಿಡುಗಡೆಯಾಗಬೇಕು ಮತ್ತು ಭಯೋತ್ಪಾದನಾ ಚಟುವಟಿಕೆಗಳು ನಿಲ್ಲಬೇಕು ಎಂದು ಮೋದಿ ಕರೆ ಕೊಟ್ಟಿದ್ದಾರೆ.
ಈಗಿನ ಯುದ್ಧದಲ್ಲಿ ಆಸಂಖ್ಯ ಮಂದಿ ಸಾವಿಗೀಡಾದ್ದಾರೆ, ಯುದ್ಧವು ಪಶ್ಚಿಮೇಷ್ಯಾದ ಜನರ ಪಾಲಿಗೆ ದುರಂತವಾಗಿ ಮಾರ್ಪಟ್ಟಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಶಾಶ್ವತವಾದ ಶಾಂತಿ ಮತ್ತು ಇನ್ನಿತರ ವಿಷಯಗಳ ಪರಿಹಾರಕ್ಕೆ ಚರ್ಚೆ ಏಕೈಕ ಮಾರ್ಗವಾಗಿದೆ. ಇದು ಸ್ವತಂತ್ರ ಮತ್ತು ಸಾರ್ವಭೌಮ ಫೆಲೆ ಸ್ತೀನ್ ರಾಷ್ಟ್ರ ನಿರ್ಮಾಣದ ಕಡೆಗೆ ಚಲಿಸಬೇಕಾಗಿದೆ. ಇಸ್ರೇಲ್ ಜೊತೆ ಶಾಂತಿಯುತವಾಗಿ ಬದುಕುವುದಕ್ಕೂ ಈ ಮಾತುಕತೆ ದಾರಿ ತೆರೆಯಬೇಕಾಗಿದೆ ಎಂದವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj