ಇನ್‌ ಸ್ಟಾಗ್ರಾಮ್‌ ನಲ್ಲಿ ಪರಿಚಯ: 14 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ - Mahanayaka
11:33 PM Tuesday 8 - September 2026

ಇನ್‌ ಸ್ಟಾಗ್ರಾಮ್‌ ನಲ್ಲಿ ಪರಿಚಯ: 14 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ

pocso
17/08/2026

ಮುಂಬೈ/ನಲಸೋಪಾರ:  ಇನ್‌ ಸ್ಟಾಗ್ರಾಮ್‌ (Instagram) ಮೂಲಕ ಸ್ನೇಹ ಬೆಳೆಸಿ 14 ವರ್ಷದ ಬಾಲಕಿಯೊಬ್ಬಳ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿರುವ ದೂರು ಮಹಾರಾಷ್ಟ್ರದ ನಲಸೋಪಾರದಲ್ಲಿ ದಾಖಲಾಗಿದೆ. ಘಟನೆಯ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಲಸೋಪಾರ ಈಸ್ಟ್ ನಿವಾಸಿ ಆಗಿರುವ 14 ವರ್ಷದ ಸಂತ್ರಸ್ತೆ ಬಾಲಕಿಗೆ ಇನ್‌ ಸ್ಟಾಗ್ರಾಮ್ ಮೂಲಕ 17 ವರ್ಷದ ಅಪ್ರಾಪ್ತ ಬಾಲಕನ ಪರಿಚಯವಾಗಿತ್ತು. ಜುಲೈ 11ರಂದು ಪ್ರಮುಖ ವಿಷಯ ಮಾತಾಡಬೇಕೆಂದು ಹೇಳಿ ಬಾಲಕಿಯನ್ನು ಆಹ್ವಾನಿಸಲಾಗಿತ್ತು. ಆಕೆ ಹೋದಾಗ, ಅಲ್ಲಿದ್ದ ಚಾಲ್‌ ನ ಕೊಠಡಿಯೊಂದಕ್ಕೆ ಕರೆದೊಯ್ದು, ಮತ್ತೊಬ್ಬ 17 ವರ್ಷದ ಬಾಲಕನೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾರೆ.

ಕೃತ್ಯವನ್ನು ಮೊಬೈಲ್‌ ನಲ್ಲಿ ವಿಡಿಯೋ ಮಾಡಿಕೊಂಡ ಆರೋಪಿಗಳು, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಆಕೆಯ ಸಹೋದರನನ್ನು ಕೊಲೆ ಮಾಡುವುದಾಗಿ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಹೆದರಿದ ಬಾಲಕಿ ಯಾರಿಗೂ ವಿಷಯ ತಿಳಿಸಿರಲಿಲ್ಲ.

ಆಗಸ್ಟ್ 15ರಂದು ಬಾಲಕಿಯ ತಾಯಿಯ ಸಹೋದರನ (ಮಾಲಿಕ/ಸೋದರಮಾವ) ಮೊಬೈಲ್ ಫೋನ್‌ ಗೆ ಈ ವಿಡಿಯೋ ಬಂದಿದೆ. ತಕ್ಷಣವೇ ಕುಟುಂಬಸ್ಥರು ಬಾಲಕಿಯನ್ನು ವಿಚಾರಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.

ಬಳಿಕ ಬಾಲಕಿಯ ದೂರಿನನ್ವಯ ತುಳಿಂಜ್ (Tulinj) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), ಐಟಿ ಕಾಯ್ದೆ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಇಬ್ಬರೂ ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi