ಹೊಂಚು? ಗಾಝಾದ ಮೇಲೆ ಮತ್ತೆ ದಾಳಿ ನಡೆಸುವುದಕ್ಕೆ ಇಸ್ರೇಲ್ ಸಿದ್ಧತೆ: ವರದಿ

ಗಾಝಾದ ಮೇಲೆ ಮತ್ತೆ ದಾಳಿ ನಡೆಸುವುದಕ್ಕೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಈಗಾಗಲೇ ರಿಸರ್ವ್ ಸೇನೆಯನ್ನು ಕರೆಸಲಾಗಿದೆ. ಫೆಬ್ರವರಿ 15ರಂದು ಮೂವರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಮತ್ತೆ ದಾಳಿ ನಡೆಸುವುದಾಗಿ ಇಸ್ರೇಲ್ ಬೆದರಿಕೆ ಹಾಕಿದೆ. ಈ ಬೆದರಿಕೆಯ ಬಳಿಕ ಇದೀಗ ರಿಸರ್ವ್ ಸೇನೆಯನ್ನು ಯುದ್ಧಕ್ಕಾಗಿ ಕರೆಸಿಕೊಳ್ಳಲಾಗಿದೆ.
ಫೆಬ್ರವರಿ 15 ಶನಿವಾರ ಮಧ್ಯಾಹ್ನದ ಒಳಗೆ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದಿದ್ದರೆ ಹಮಾಸ್ ನ ವಿರುದ್ಧ ಯುದ್ಧ ಹೂಡುವುದಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆದರಿಸಿದ್ದಾರೆ. ಇದೇ ವೇಳೆ ಶನಿವಾರದಂದು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಎಂದು ಈ ಮೊದಲು ಅಮೆರಿಕಾದ ಅಧ್ಯಕ್ಷ ಟ್ರಂಪ್ ಹೇಳಿದ್ದರು.
ಒಂದು ವೇಳೆ ಬಿಡುಗಡೆಗೊಳಿಸದಿದ್ದರೆ ಹಮಾಸ್ ಗೆ ನರಕದ ಬಾಗಿಲನ್ನು ತೋರಿಸ್ತೇವೆ ಎಂದು ಅವರು ಗುಡುಗಿದ್ದರು.
ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ವ್ಯಾಪಕವಾಗಿ ಉಲ್ಲಂಘಿಸುತ್ತಿರುವುದರಿಂದ ಒತ್ತೆಯಾಳುಗಳ ಬಿಡುಗಡೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಹಮಾಸ್ ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj