ಶಾಕಿಂಗ್! ದೇಶದಲ್ಲಿ ಹೆಚ್ಚಾಗ್ತಿದೆ ಆತ್ಮಹತ್ಯೆ ಕೇಸ್; ಬಯಲಾಯ್ತು ಅಸಲಿ ಸತ್ಯ - Mahanayaka

ಶಾಕಿಂಗ್! ದೇಶದಲ್ಲಿ ಹೆಚ್ಚಾಗ್ತಿದೆ ಆತ್ಮಹತ್ಯೆ ಕೇಸ್; ಬಯಲಾಯ್ತು ಅಸಲಿ ಸತ್ಯ

13/02/2025


Provided by

ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಆಘಾತಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ತಿಳಿಸಿದೆ. 20 22 ರಲ್ಲಿ 1,70,924 ಮಂದಿ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಈ ಸಂಖ್ಯೆಯಲ್ಲಿ 35 ಶೇಕಡಾ ಆತ್ಮಹತ್ಯೆ ಕೂಡ 18 ರಿಂದ 30 ವರ್ಷದ ಒಳಗಿನವರದ್ದಾಗಿದೆ ಎಂದು ವರದಿ ತಿಳಿಸಿದೆ.


Provided by

ಹಾಗೆಯೇ ಹೀಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಆರು ಶೇಕಡ ಮಂದಿ 18 ವಯಸ್ಸಿಗಿಂತ ಕೆಳಗಿನವರಾಗಿದ್ದಾರೆ. ದೇಶದಲ್ಲಿ ನಡೆದ ಆತ್ಮಹತ್ಯೆಗಳಲ್ಲಿ 41 ಶೇಕಡಾ ಆತ್ಮಹತ್ಯೆ ಕೂಡ 18 ರಿಂದ 30 ವರ್ಷಗಳ ಒಳಗಿನವರದ್ದಾಗಿದೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ವಿದ್ಯಾರ್ಥಿಗಳು 13,044 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಒಟ್ಟು ಆತ್ಮಹತ್ಯೆ ಪ್ರಕರಣದ 7.6 ಶೇಕಡವಾಗಿದೆ. ಇದರಲ್ಲಿ 2248 ಆತ್ಮಹತ್ಯೆ ಕೂಡ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕಾಗಿ ನಡೆದಿದೆ.


Provided by

2020 ರಲ್ಲಿ 18 ವಯಸ್ಸಿಗಿಂತ ಕೆಳಗಿನ 10,000 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2021 ರಲ್ಲಿ 18 ವಯಸಿಗಿಂತ ಕೆಳಗಿನ 11000 ಮಕ್ಳು ಆತ್ಮಹತ್ಯೆ ಮಾಡಿಕೊಂಡಿದ್ದರು. 2017 ರಿಂದ ಈ ವಯಸ್ಸಿನ ಮಕ್ಕಳ ಆತ್ಮಹತ್ಯೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಲೇ ಬಂದಿದೆ ಎಂದು ವರದಿ ತಿಳಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ