ಸೇಡು..? ಇರಾನ್ ವಿರುದ್ಧ ಪ್ರತೀಕಾರ ಗ್ಯಾರಂಟಿ ಎಂದ ಇಸ್ರೇಲ್ ನಾಯಕ - Mahanayaka

ಸೇಡು..? ಇರಾನ್ ವಿರುದ್ಧ ಪ್ರತೀಕಾರ ಗ್ಯಾರಂಟಿ ಎಂದ ಇಸ್ರೇಲ್ ನಾಯಕ

18/04/2024

ಇರಾನ್ ವಿರುದ್ಧ ಪ್ರತೀಕಾರ ತೀರಿಸಲಾಗುವುದು ಎಂದು ಇಸ್ರೇಲ್ ನ ತೀವ್ರ ಬಲಪಂಥೀಯ ನಾಯಕ ಮತ್ತು ಹಣಕಾಸು ಸಚಿವ ಬೈಸಾಲೆಲ್ ಸ್ಮಾರ್ಟಿಚ್ ಹೇಳಿದ್ದಾರೆ. ಇರಾನ್‌ನನ್ನು ನಡುಗಿಸುವ ಪ್ರತೀಕಾರವನ್ನು ತೀರಿಸಬೇಕು ಎಂದವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇನ್ನೊಮ್ಮೆ ಇಸ್ರೇಲ್ ನ ಮೇಲೆ ದಾಳಿ ನಡೆಸುವ ದುಸ್ಸಾಹಸ ಮಾಡದಿರುವಷ್ಟು ತೀವ್ರವಾಗಿ ಇಸ್ರೇಲ್ ಮರಳಿ ದಾಳಿ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ ಮಧ್ಯೇಷ್ಯದಲ್ಲಿ ಇಸ್ರೇಲ್ ನ ಅಸ್ತಿತ್ವವನ್ನು ಶಾಶ್ವತಗೊಳಿಸುವುದಕ್ಕೂ ಈ ದಾಳಿ ಅಗತ್ಯ ಇದೆ ಎಂದವರು ಹೇಳಿದ್ದಾರೆ.

ಇದೇ ವೇಳೆ ಇರಾನ್ ಮೇಲೆ ಮಾಡುವ ಅತಿ ಸಣ್ಣ ದಾಳಿ ದಾಳಿಗೂ ನಾವು ಅತಿ ಪ್ರಬಲ ಪ್ರಹಾರವನ್ನು ನೀಡಲಿದ್ದೇವೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ