ಗಾಝಾ ಮೇಲೆ ನಿಲ್ಲದ ಇಸ್ರೇಲ್ ಕ್ರೌರ್ಯ: ಗಾಝಾಗೆ ಅನ್ನ ನೀಡುತ್ತಿದ್ದ ಶೆಪ್ ಹತ್ಯೆ - Mahanayaka
7:14 PM Saturday 25 - January 2025

ಗಾಝಾ ಮೇಲೆ ನಿಲ್ಲದ ಇಸ್ರೇಲ್ ಕ್ರೌರ್ಯ: ಗಾಝಾಗೆ ಅನ್ನ ನೀಡುತ್ತಿದ್ದ ಶೆಪ್ ಹತ್ಯೆ

04/12/2024

ಗಾಝಾದ ಮೇಲೆ ಮನಬಂದಂತೆ ನಡೆದುಕೊಳ್ಳುವ ತನ್ನ ದುರ್ನೀತಿಯನ್ನು ಇಸ್ರೇಲ್ ಇನ್ನೂ ನಿಲ್ಲಿಸಿಲ್ಲ. ಗಾಝಾದ ಅಸಂಖ್ಯ ನಿರಾಶ್ರಿತರ ಪಾಲಿಗೆ ಅನ್ನದ ಬಟ್ಟಲು ಆಗಿದ್ದ ಗಾಝಾ ಸೂಪ್ ಕಿಚನ್ ಎಂಬ ಆಹಾರ ತಯಾರಿಕಾ ಕೇಂದ್ರಗಳ ಶೆಪ್ ಆಗಿದ್ದ ಮಹ್ಮೂದ್ ಅಲ್ ಮದ್ ಹೂನ್ ರನ್ನು ಇಸ್ರೇಲ್ ಹತ್ಯೆ ಮಾಡಿದೆ. ಪ್ರತಿದಿನ 3000ದಷ್ಟು ನಿರಾಶ್ರಿತರಿಗೆ ಗಾಝಾ ಸೂಪ್ ಕಿಚನ್ ಮೂಲಕ ಆಹಾರವನ್ನು ವಿತರಿಸಲಾಗುತ್ತಿತ್ತು. ಇದರ ಮುಖ್ಯ ಅಡುಗೆಯಾಳಾಗಿ ಈ ಮಹ್ಮೂದ್ ಅಲ್ ಮದ್ ಹೂನ್ ಗುರುತಿಸಿಕೊಂಡಿದ್ದರು.

ಪಶ್ಚಿಮ ಗಾಝಾದ ಕಮಾಲ್ ಅದ್ವಾನ್ ಆಸ್ಪತ್ರೆಗೆ ಇವರು ಭೇಟಿ ನೀಡಿದ್ದ ವೇಳೆ ಇಸ್ರೇಲ್ ಸೇನೆ ಹಾರಿಸಿದ ಡ್ರೋನ್ ಗೆ ಬಲಿಯಾಗಿದ್ದಾರೆ. ತೀವ್ರ ಹಸಿವನ್ನು ಎದುರಿಸುತ್ತಿರುವ ಬೈತ್ ಲಾಹಿಯಾದ ಫೆಲೆಸ್ತೀನಿಯರಿಗೆ ಆಹಾರವನ್ನು ಒದಗಿಸುವುದರಲ್ಲಿ ಇವರು ನಿರತರಾಗಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಗಾಝಾ ಸೂಪ್ ಕಿಚನ್ ಅನ್ನು ಇವರು ಮತ್ತು ಇವರ ಮನೆಯವರು ಹಾಗೂ ಗೆಳೆಯರು ಸೇರಿ ಆರಂಭಿಸಿದ್ದರು. ಮೊದಲ ದಿನವೇ ಈ ತಂಡವು 120 ಮಂದಿಗೆ ಆಹಾರವನ್ನು ಒದಗಿಸಿತ್ತು ಆ ಬಳಿಕ ಈ ಗಾಝಾ ಸೂಪ್ ಕಿಚನ್ ಮೂಲಕ ಪ್ರತಿದಿನ 3000 ಕಿಂತಲೂ ಅಧಿಕ ಮಂದಿಗೆ ಆಹಾರವನ್ನು ಒದಗಿಸುತ್ತಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ