ನಾಗಮಂಗಲ ಗಲಾಟೆಗೆ ಈ ವಿಚಾರವೇ ಪ್ರಮುಖ ಕಾರಣ!
ನಾಗಮಂಗಲ: ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಮುಖ್ಯ ಕಾರಣ ಏನು ಎನ್ನುವುದನ್ನು ಮಂಡ್ಯ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೂಕ್ಷ್ಮ ಪ್ರದೇಶದಲ್ಲಿ 5ರಿಂದ 7 ನಿಮಿಷಗಳ ಕಾಲ ಡಾನ್ಸ್ ನಡೆಸಿದ ವಿಚಾರವೇ ಗಲಾಟೆಗೆ ಮುಖ್ಯ ಕಾರಣವಾಗಿದೆ. ಒಂದು ಗುಂಪಿನವರು ಎಲ್ಲಿ ಡಾನ್ಸ್ ಮಾಡಬೇಡಿ ಎಂದರೆ, ಇನ್ನೊಂದು ಗುಂಪಿನವರು ನಾವು ಇಲ್ಲೇ ಡಾನ್ಸ್ ಮಾಡುತ್ತೇವೆ ಎಂದಿರುವುದೇ ಗಲಾಟೆಗೆ ಕಾರಣವಾಯಿತು ಎನ್ನುವ ವಿಚಾರವನ್ನು ಅವರು ತಿಳಿಸಿದ್ದಾರೆ.
ಮಂಡ್ಯ ಎಸ್.ಪಿ. ಹೇಳಿದಿಷ್ಟು:
ಗಣೇಶನ ಮೆರವಣಿಗೆ ವೇಳೆ ಸೂಕ್ಷ್ಮ ಪ್ರದೇಶದಲ್ಲಿ 5ರಿಂದ 7 ನಿಮಿಷಗಳ ಕಾಲ ಅದೇ ಸ್ಥಳದಲ್ಲಿ ಡಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇನ್ನೊಂದು ಗುಂಪಿನವರು ಬಂದು, ಇಲ್ಲಿ ಮಾಡೋದು ಬೇಡ ಮುಂದೆ ಹೋಗಿ ಮಾಡಿ ಎಂದಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿದ್ದವರು ಮತ್ತು ಸ್ಥಳೀಯರಿಗೆ ವಾಗ್ವಾದ ನಡೆದಿದೆ. ಈ ವೇಳೆ ಪೊಲೀಸರು ಎಲ್ಲರನ್ನು ಚದುರಿಸಿದ್ದಾರೆ.
ಇದಾದ ಮೇಲೆ ಗಣೇಶ ಮೆರವಣಿಯೆಲ್ಲಿದ್ದವರು ಬಂದು ನಮಗೆ ಹೊಡೆದಿದ್ದೀರಿ, ಅಲ್ಲಿ ಹೋಗಬಾರದು ಇಲ್ಲಿ ಹೋಗಬಾರದು ಅಂತ ರಿಸ್ಟ್ರಿಕ್ಷನ್ ಹಾಕಿದ್ದೀರಿ ಎಂದು ಪೊಲೀಸರ ಮೇಲೆ ಬ್ಲೇಮ್ ಮಾಡುತ್ತಾರೆ. ಈ ವೇಳೆ ಅವರ ಜೊತೆ ಮಾತನಾಡಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಈ ಸಂದರ್ಭದಲ್ಲಿ ಎರಡೂ ಕಡೆಯ ಗುಂಪಿನಲ್ಲಿ ಹೆಚ್ಚಿನ ಜನರು ಸೇರ್ಪಡೆಗೊಂಡಿದ್ದಾರೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆಸಿಕೊಂಡಿದ್ದಾರೆ. ೀ ಹಂತದಲ್ಲಿ ಪೊಲೀಸರು ಗುಂಪನ್ನು ಮತ್ತೆ ಚದುರಿಸಿದ್ದಾರೆ. ಈ ವೇಳೆ ಅಲ್ಲಿಂದ ಹೋದವರು ಅಂಗಡಿಗಳ ಬಳಿ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರು 10 ಗಂಟೆ ವೇಳೆಗೆ ಸಂಪೂರ್ಣ ಹತೋಟಿಗೆ ಪರಿಸ್ಥಿತಿ ತಂದಿದ್ದೇವೆ ಎಂದು ಅವರು ತಿಳಿಸಿದರು.
ಸಿಸಿ ಕ್ಯಾಮರಾ ಫೂಟೇಜ್ ಆಧರಿಸಿ ಕ್ರಮ:
ಪ್ರತಿ ಬಾರಿಯೂ ಇದೇ ರಸ್ತೆಯಲ್ಲಿ ಮೆರವಣಿಗೆ ನಡೆಯುತ್ತಿದೆ. ಆದರೆ, ಈ ಬಾರಿ ಸೂಕ್ಷ್ಮ ಪ್ರದೇಶದಲ್ಲಿ ನಿಂತು ಡಾನ್ಸ್ ಮಾಡಿರುವ ವೇಳೆ ಗಲಾಟೆ ಆರಂಭಗೊಂಡಿದೆ. ಅಲ್ಲದೇ ಎರಡೂ ಗುಂಪುಗಳಲ್ಲಿ ಕೂಡ ಅಚಾನಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ ಎಂದು ಎಸ್ ಪಿ ತಿಳಿಸಿದರು. ಗಲಾಟೆಯಲ್ಲಿ ಭಾಗಿಯಾದವರ ವಿರುದ್ಧ ಸಿಸಿ ಕ್ಯಾಮರಾ ಫೂಟೇಜ್ ಹಾಗೂ ವಿಡಿಯೋಗಳನ್ನು ಸಂಗ್ರಹಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: