ರೈಲು ಹೋಗಿ ತುಂಬಾ ಹೊತ್ತಾಯ್ತು: ಡ್ರಿಂಕ್ ಮಾಡಿ ಸಖತ್ ನಿದ್ದೆ ಮಾಡಿದ ಗೇಟ್ ಮ್ಯಾನ್! - Mahanayaka

ರೈಲು ಹೋಗಿ ತುಂಬಾ ಹೊತ್ತಾಯ್ತು: ಡ್ರಿಂಕ್ ಮಾಡಿ ಸಖತ್ ನಿದ್ದೆ ಮಾಡಿದ ಗೇಟ್ ಮ್ಯಾನ್!

09/11/2024

ರೈಲು ದಾಟಿ ಹೋಗಿ ಸಮಯವಾದರೂ ರೈಲ್ವೆ ಗೇಟ್ ತೆರೆಯದಿರುವುದನ್ನು ನೋಡಿ ರೈಲುಗೇಟಿನ ಅಕ್ಕಪಕ್ಕದಲ್ಲಿ ನಿಂತವರು ಕಂಗಾಲಾದರು. ಯಾಕೆ ಗೇಟ್ ತೆರೆಯುತ್ತಿಲ್ಲ ಎಂದು ಅಂದುಕೊಂಡು ಕುತೂಹಲದಿಂದ ರೈಲ್ವೆ ಗೇಟ್ ಬಳಿಯಲ್ಲಿ ಗೇಟ್ ಮ್ಯಾನ್ ಇರುವ ಕೊಠಡಿಗೆ ಇಣುಕಿದರು. ನೋಡಿದ್ರೆ ಗೇಟ್ ಮ್ಯಾನ್ ಮದ್ಯಪಾನ ಮಾಡಿ ನಿದ್ದೆಯಲ್ಲಿದ್ದ. ಈ ಘಟನೆ ನಡೆದಿರುವುದು ಕೇರಳದ ಕಣ್ಣೂರಿನಲ್ಲಿ.

ಅಲ್ಲಿ ಸೇರಿದವರು ಈ ಗೇಟ್ ಮ್ಯಾನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಅವರು ನಡೆಯಲು ಸಾಧ್ಯವಾಗದೆ ತೂರಾಡಿದರು. ಈ ನಡುವೆ ಇದೇ ದಾರಿಯಾಗಿ ಬಂದ ಇನ್ನೊಂದು ಟ್ರೈನನ್ನು ಸಿಗ್ನಲ್ ಸಿಗದ ಕಾರಣ ಅರ್ಧದಲ್ಲೇ ನಿಲ್ಲಿಸಲಾಯಿತು. ಇದರಿಂದಾಗಿ ಹತ್ತಿರದ ಇನ್ನಿತರ ರೈಲ್ವೆ ಗೇಟ್ ಗಳನ್ನೂ ಮುಚ್ಚಲಾಯಿತು. ಸಂಬಂಧಿತ ಅಧಿಕಾರಿಗಳು ಅಲ್ಲಿಗೆ ಬಂದ ಬಳಿಕ ಸಮಸ್ಯೆ ಪರಿಹಾರವಾಯಿತು.

ಕಣ್ಣೂರಿನ ಎಡಕ್ಕಾಡ್ ಬಳಿಯ ನಡಾಲ್ ರೈಲ್ವೆ ಗೇಟ್ ನಲ್ಲಿ ಶುಕ್ರವಾರ ರಾತ್ರಿ 8:30 ಗಂಟೆಗೆ ಈ ಘಟನೆ ನಡೆದಿದೆ. ಕೊಯಂಬತ್ತೂರು ಕಣ್ಣೂರು ಪ್ಯಾಸೆಂಜರ್ ರೈಲು ಸಾಗುವುದಕ್ಕಾಗಿ ಈ ಗೇಟ್ ಅನ್ನು ಹಾಕಲಾಗಿತ್ತು. ಈ ರೈಲು ದಾಟಿ 10 ನಿಮಿಷವಾದರೂ ಗೇಟ್ ಅನ್ನು ತೆರೆಯದೇ ಇದುದರಿಂದ ವಾಹನದಲ್ಲಿದ್ದವರು ಮತ್ತು ಪಾದ ಚಾರಿಗಳು ಗೇಟ್ ಮ್ಯಾನ್ ನ ಹತ್ತಿರ ತೆರಳಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ