ಸಂಘರ್ಷ ಉಂಟಾಗಿ ಆರು ತಿಂಗಳಾಯ್ತು: ಗೌಸ್ ಗಂಜ್ ನಲ್ಲಿ ಇನ್ನೂ ಆರದ ಬೆಂಕಿಯ ಕಿಡಿ

ಉತ್ತರ ಪ್ರದೇಶದ ಬರೇಲ್ವಿಯ ಗೌಸ್ ಗಂಜ್ ನಲ್ಲಿ ಸಂಘರ್ಷ ಉಂಟಾಗಿ ಆರು ತಿಂಗಳು ಕಳೆದರೂ ಕೂಡ ಪರಿಸ್ಥಿತಿ ತಣ್ಣಗಾಗಿಲ್ಲ. ಜುಲೈ 18ರಂದು ಈ ಪ್ರದೇಶದಲ್ಲಿ ಓರ್ವ ಹಿಂದೂ ಯುವಕನ ಹತ್ಯೆ ನಡೆದಿತ್ತು. ಬಳಿಕ ಘರ್ಷಣೆ ಪ್ರಾರಂಭವಾಯಿತು. ಈ ಘರ್ಷಣೆಯ ಕಾರಣದಿಂದಾಗಿ 42 ಮುಸ್ಲಿಂ ಕುಟುಂಬಗಳು ಅಲ್ಲಿಂದ ಪಲಾಯನ ಮಾಡಿದುವು. ಸರಕಾರಿ ಭೂಮಿಯನ್ನು ಅತಿಕ್ರಮಿಸಿದ ಆರೋಪದಲ್ಲಿ ಎಂಟು ಮನೆಗಳನ್ನು ಆ ಬಳಿಕ ಬುಲ್ಡೋಜಲ್ ಮೂಲಕ ಉರುಳಿಸಲಾಯಿತು. ಅಂದಿನಿಂದ ಇಂದಿನವರೆಗೆ 58 ಮುಸ್ಲಿಂ ಪುರುಷರು ಜೈಲಲ್ಲಿದ್ದಾರೆ. ಹೀಗೆ ಇಲ್ಲಿಂದ ಓಡಿ ಹೋದ ಮುಸ್ಲಿಂ ಕುಟುಂಬಗಳು ತಮ್ಮ ಬಂಧುಗಳ ಮನೆಯಲ್ಲಿ ಮತ್ತು ಇನ್ನಿತರ ಕಡೆ ಆಶ್ರಯ ಪಡೆದರು.
ಬಾಡಿಗೆ ಕೊಡಲು ಸಾಧ್ಯವಾಗದೆ ಇವರಲ್ಲಿ ಅನೇಕರು ಮನೆ ಬದಲಾಯಿಸಿದರು. ಸರಿಯಾದ ಕೆಲಸ ಇಲ್ಲದೆ ಸಿಕ್ಕ ಸಿಕ್ಕ ಕೆಲಸವನ್ನು ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳತೊಡಗಿದರು. ಇವರ ಮಕ್ಕಳ ವಿದ್ಯಾಭ್ಯಾಸವು ಅರ್ಧದಲ್ಲೇ ಸ್ಥಗಿತಗೊಂಡಿತ್ತು.
ಈಗ 11 ಕುಟುಂಬಗಳು ಮರಳಿವೆ. ಆದರೆ ಅವರ ಮನೆಗಳೇ ಇಲ್ಲ. ಕೇವಲ ಅವಶೇಷಗಳು ಮಾತ್ರ ಅಲ್ಲಿ ಉಳಿದಿವೆ.
ಅವರ ಮನೆಯನ್ನ ದರೋಡೆ ಮಾಡಲಾಗಿದೆ ಬಾಗಿಲುಗಳಿಲ್ಲ. ನಾವು ದಿನಗೂಲಿ ಕಾರ್ಮಿಕರಾಗಿದ್ದೇವೆ. ನನ್ನಿಬ್ಬರು ಮಕ್ಕಳು ಮತ್ತು ಪತಿಯ ಮೇಲಿನ ಕೇಸುಗಳನ್ನು ನಿರ್ವಹಿಸುವುದಕ್ಕೆ ನನ್ನಲ್ಲಿ ಹಣವಿಲ್ಲ. ಅವರು ಜೈಲಿನಿಂದ ಹೇಗೆ ಹೊರಗೆ ಬರುತ್ತಾರೋ ಎಂದು ನನಗೆ ಗೊತ್ತಿಲ್ಲ ಎಂದು ಶಫೀಕ ಎಂಬ ಅರವತ್ತು ವಯಸ್ಸಿನ ಮಹಿಳೆ ಹೇಳುತ್ತಾರೆ.
62 ವರ್ಷದ ರುಕ್ಸಾನ ಅಂತೂ ಮಾತಾಡೋದಕ್ಕೆ ಸಿದ್ದ ಇಲ್ಲ.
ಅವರು ತನ್ನ ಕುಸಿದು ಬಿದ್ದ ಮನೆಯ ವರಾ0ಡದಲ್ಲಿ ಕುಳಿತಿದ್ದಾರೆ. ಆಕೆಯ ದೃಷ್ಟಿ ಪೊಲೀಸರ ಕಡೆಗೆ ನೆಟ್ಟಿದೆ. ನನಗೆ ಮಾತಾಡಲು ಇಷ್ಟ ಇಲ್ಲ.. ನಮ್ಮನ್ನು ಯಾರೂ ಲೆಕ್ಕಿಸುವುದೇ ಇಲ್ಲ ಎಂದು ಆಕೆ ಹೇಳುತ್ತಾರೆ.
23 ವರ್ಷದ ಮೊಹಮ್ಮದ್ ತಾಹಿರ್ ಕೂಡ ಇಲ್ಲಿದ್ದಾರೆ. ಆದರೆ ಅವರು ಇಲ್ಲಿ ವಾಸಿಸಲು ಬಂದಿಲ್ಲ. ಅವರು ಹರಿಯಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ತಂದೆ ಮತ್ತು ತಾಯಿಯನ್ನು ತಮ್ಮ ಮನೆಯಲ್ಲಿ ಕೂರಿಸಿ ಹೋಗಬೇಕು ಎಂದು ಅವರು ಬಂದಿದ್ದಾರೆ. ಆದರೆ ಅಲ್ಲಿ ಮನೆಯೇ ಇಲ್ಲ. ಇನ್ನು ನಾನು ಆರಂಭದಿಂದಲೇ ಮನೆ ಕಟ್ಟಬೇಕಾಗಿದೆ ಎಂದವರು ಹೇಳುತ್ತಾರೆ.
ಒಂದು ಕಾಲದಲ್ಲಿ ಗೌಸ್ ಗಂಜ್ ಎಂಬುದು ರೈತರು ಮತ್ತು ಕಾರ್ಮಿಕರ ಪ್ರದೇಶವಾಗಿತ್ತು. ಘರ್ಷಣೆ ಆರಂಭವಾದ ಬಳಿಕ ಇಲ್ಲಿ ಎಲ್ಲವೂ ತಲೆಕೆಳಗಾಯಿತು. ದುಷ್ಕರ್ಮಿಗಳು ಮುಸ್ಲಿಮರ ಎತ್ತು ಗೋವುಗಳನ್ನು ಎತ್ತಿಕೊಂಡು ಹೋದರು. ಟ್ರ್ಯಾಕ್ಟರ್ಗಳು ಮತ್ತು ಕೃಷಿ ಉಪಕರಣಗಳನ್ನು ಬಲವಂತದಿಂದ ಎಳೆದೊಯ್ದುಕೊಂಡು ಹೋದರು. ಈಗ ಇವರ ಕೃಷಿ ಜಮೀನು ಅಪಾಯದಲ್ಲಿದೆ. ತೀರ ಕಡಿಮೆ ಬೆಲೆಗೆ ತಮ್ಮ ಜಮೀನನ್ನು ಕೇಳುತ್ತಿದ್ದಾರೆ. ಒಪ್ಪದೇ ಇದ್ದಾಗ ನಿಮ್ಮ ಮೇಲೆ ಇನ್ನಷ್ಟು ಕೇಸುಗಳನ್ನು ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ನಮಗೆ ನ್ಯಾಯ ಲಭಿಸುತ್ತದೆ ಎಂಬ ನಿರೀಕ್ಷೆಯೇ ಇಲ್ಲ ಎಂದು ಓರ್ವರು ಹೇಳುತ್ತಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj