ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುವುದು ನ್ಯಾಯವಲ್ಲ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ - Mahanayaka

ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುವುದು ನ್ಯಾಯವಲ್ಲ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ

05/03/2025


Provided by

“ಭಾರತ, ಚೀನಾ ಸೇರಿದಂತೆ ಇತರೆ ದೇಶಗಳು ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುತ್ತಿರುವುದು ನ್ಯಾಯವಲ್ಲ” ಎಂದು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಇದಕ್ಕೆ ಪ್ರತಿ ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ.


Provided by

ಈ ಸುಂಕಗಳು ಏಪ್ರಿಲ್‌ 2ರಿಂದ ಜಾರಿಗೆ ಬರಲಿವೆ ಎಂದಿದ್ದಾರೆ. “ನಮ್ಮಿಂದ ಆಮದು ಮಾಡಿಕೊಳ್ಳುತ್ತಿರುವ ಸರಕುಗಳಿಗೆ ವಿದೇಶಗಳು ಹಾಕುತ್ತಿರುವ ಸುಂಕಗಳಿಗೆ ಅನುಗುಣವಾಗಿ ನಾವು ಅವರಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಪ್ರತಿ ಸುಂಕು ವಿಧಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಮಂಗಳವಾರ ರಾತ್ರಿ ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು.


Provided by

“ಇತರೆ ದೇಶಗಳು ನಮ್ಮ ಮೇಲೆ ದಶಕಗಳಿಂದ ಸುಂಕ ಹಾಕುತ್ತಿವೆ. ಈಗ ನಾವು ಅವರ ಮೇಲೆ ಸುಂಕು ಹಾಕುವ ಸರದಿ ಬಂದಿದೆ.

ಯುರೋಪಿಯನ್ ಯೂನಿಯನ್, ಚೀನಾ, ಬ್ರೆಜಿಲ್, ಭಾರತ, ಮಕ್ಸಿಕೋ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರಿಗೆ ವಿಧಿಸುವ ತೆರಿಗೆಗಿಂತಲೂ ಅದೆಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಸುಂಕ ಹಾಕುತ್ತಿದ್ದಾರೆ. ಇದು ನ್ಯಾಯವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಭಾರತ ನಮ್ಮ ವಾಹನಗಳಿಗೆ ಶೇ.100ಕ್ಕೂ ಹೆಚ್ಚು ಸುಂಕ ವಿಧಿಸುತ್ತದೆ” ಎಂದು ಅವರು ಇದೇ ವೇಳೆ ತಿಳಿಸಿದರು. ಕಳೆದ ಫೆಬ್ರವರಿಯಲ್ಲಿ, ಅಧ್ಯಕ್ಷ ಟ್ರಂಪ್ ಮಾತನಾಡುತ್ತಾ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭಾರತ ಮತ್ತು ಚೀನಾ ವಿರುದ್ಧ ಪ್ರತಿ ಸುಂಕ ಹೇರಲಿದೆ ಎಂದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡ ವೇಳೆಯಲ್ಲೂ ಟ್ರಂಪ್‌ ಈ ವಿಚಾರವನ್ನು ಸ್ಪಷ್ಟಪಡಿಸಿದ್ದರು. ವಾಷ್ಟಿಂಗ್ಟನ್‌ನ ಪ್ರತಿತೆರಿಗೆಯಿಂದ ಭಾರತವೂ ಹೊರತಾಗಿರಲಿಲ್ಲ. ಸುಂಕದ ವಿಚಾರವಾಗಿ ನನ್ನೊಂದಿಗೆ ಯಾರೂ ವಾದ ಮಾಡಲು ಸಾಧ್ಯವಿಲ್ಲ” ಎಂದಿದ್ದರು.

“ನಮ್ಮ ಉತ್ಪನ್ನಗಳ ಮೇಲೆ ಚೀನಾ ದುಪ್ಪಟ್ಟು ಸಂಕು ಹಾಕುತ್ತಿದೆ. ದಕ್ಷಿಣ ಕೊರಿಯಾ ಸರಾಸರಿ ನಾಲ್ಕು ಪಟ್ಟು ಸುಂಕ ಹಾಕುತ್ತಿದೆ. ನಾವು ದಕ್ಷಿಣ ಕೊರಿಯಾಗೆ ಮಿಲಿಟರಿ ಮತ್ತು ಇತರೆ ಹಲವು ರೀತಿಯಲ್ಲಿ ಸಹಕಾರ ನೀಡುತ್ತಿದ್ದೇವೆ. ಆದರೆ ಆಗುತ್ತಿರುವುದೇನು? ಈ ವ್ಯವಸ್ಥೆ ಅಮೆರಿಕಕ್ಕೆ ನ್ಯಾಯಯುವತವಾಗಿಲ್ಲ” ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ