ಫ್ಲೈಓವರ್ ಮೇಲಿಂದ ಜಿಗಿದ ನರ್ಸಿಂಗ್ ವಿದ್ಯಾರ್ಥಿ: ಕೊನೆಗೆ ಆಗಿದ್ದೇ ಪವಾಡ..! - Mahanayaka

ಫ್ಲೈಓವರ್ ಮೇಲಿಂದ ಜಿಗಿದ ನರ್ಸಿಂಗ್ ವಿದ್ಯಾರ್ಥಿ: ಕೊನೆಗೆ ಆಗಿದ್ದೇ ಪವಾಡ..!

06/05/2024

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ನರ್ಸಿಂಗ್ ವಿದ್ಯಾರ್ಥಿಯೋರ್ವ ನವದೆಹಲಿಯ ಲಲಿತ್ ಹೋಟೆಲ್ ಬಳಿಯ ರಂಜಿತ್ ಸಿಂಗ್ ಫ್ಲೈಓವರ್ ನಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದನೇ ಸೆಮಿಸ್ಟರ್ B.Sc ನರ್ಸಿಂಗ್ ವಿದ್ಯಾರ್ಥಿ ಮೊಹಮ್ಮದ್ ಚಂದ್ (25) ಫ್ಲೈಓವರ್ ಕೆಳಗಿನ ರಸ್ತೆಯಲ್ಲಿ ಬಿದ್ದಿರುವುದನ್ನು ಗಸ್ತು ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಚಂದ್ ಮೊದಲು ತನ್ನ ಬ್ಯಾಗನ್ನು ಫ್ಲೈಓವರ್ ನಿಂದ ಎಸೆದು ನಂತರ ಹಾರಿದ್ದಾನೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.


“ಅವರನ್ನು ಪಿಸಿಆರ್ ವ್ಯಾನ್ ನಲ್ಲಿ ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅಧಿಕಾರಿ ಹೇಳಿದ್ದು ಘಟನೆಯ ಇಬ್ಬರು ಪ್ರತ್ಯಕ್ಷದರ್ಶಿಗಳು ಇದ್ದರು.

ಬಿಹಾರ ಮೂಲದ ಚಂದ್ ಪಟೇಲ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಶನಿವಾರ ಪರೀಕ್ಷೆ ಬರೆದಿದ್ದರು ಮತ್ತು ಸೋಮವಾರ ಮತ್ತೊಂದು ಪರೀಕ್ಷೆಗೆ ಹಾಜರಾಗಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ ಅವರ ಈ ಕೃತ್ಯದ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ