ಜಪಾನ್‌ನಲ್ಲಿ ಜನನ ಅನುಪಾತ ಭಾರೀ ಕುಸಿತ: ಹೊಸ ಉದ್ಯೋಗ ನೀತಿ ಘೋಷಣೆ - Mahanayaka
1:41 AM Wednesday 17 - September 2025

ಜಪಾನ್‌ನಲ್ಲಿ ಜನನ ಅನುಪಾತ ಭಾರೀ ಕುಸಿತ: ಹೊಸ ಉದ್ಯೋಗ ನೀತಿ ಘೋಷಣೆ

10/12/2024

ಜಪಾನಿನಲ್ಲಿ ಜನನ ಅನುಪಾತ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿರುವುದನ್ನು ಪರಿಗಣಿಸಿ ಇದೀಗ ಹೊಸ ಉದ್ಯೋಗ ನೀತಿಯನ್ನು ಸರ್ಕಾರ ಘೋಷಿಸಿದೆ. ವಾರದಲ್ಲಿ ಕೇವಲ ನಾಲ್ಕು ದಿನಗಳ ಕಾಲ ಮಾತ್ರ ಕೆಲಸ ಮಾಡಿ ಉಳಿದ ಮೂರು ದಿನಗಳನ್ನು ಮನೆಯಲ್ಲಿ ಸಂಗಾತಿಯೊಂದಿಗೆ ಕಳೆಯುವುದಕ್ಕೆ ಅವಕಾಶವನ್ನು ನೀಡುವ ಹೊಸ ನೀತಿಯ ಜಾರಿಗೆ ಜಪಾನ್ ಸಿದ್ಧವಾಗಿದೆ.


Provided by

ಟೋಕಿಯೋ ಗವರ್ನರ್ ಯುರಿಕೊ ಕೊಕೆ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ನಿಂದ ಮೆಟ್ರೋಪಾಲಿಟನ್ ಗೌರ್ನರೇಟ್ ನ ಉದ್ಯೋಗಿಗಳಿಗೆ ವಾರದಲ್ಲಿ ಮೂರು ದಿನ ರಜೆ ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಪ್ರಸವ ಮತ್ತು ಮಕ್ಕಳನ್ನು ಆರೈಕೆ ಮಾಡುವ ಹೆಸರಲ್ಲಿ ಯಾರೂ ತಮ್ಮ ಕೆರಿಯರನ್ನು ಉಪೇಕ್ಷಿಸಬೇಕಾದ ಅಗತ್ಯ ಬರಬಾರದು ಎಂಬ ಕಾರಣಕ್ಕೆ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಅದೇ ವೇಳೆ ತಮ್ಮ ವೇತನದಿಂದ ಸಣ್ಣದೊಂದು ಭಾಗವನ್ನು ಕೈ ಬಿಟ್ಟು ಬೇಗನೆ ಕೆಲಸದಿಂದ ಮನೆಗೆ ಹೋಗುವುದಕ್ಕೂ ಅವಕಾಶವನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ.
ಜಪಾನಿನಲ್ಲಿ ಜನನ ಪ್ರಮಾಣ ಜಾಗತಿಕವಾಗಿಯೇ ಅತ್ಯಂತ ಕಡಿಮೆ ಇರುವುದು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ