ಯಹೂದಿ ರಾಷ್ಟ್ರವೇ ನಮ್ಮ ಅಂತಿಮ ಗುರಿ: ಇಸ್ರೇಲ್ ಅರ್ಥ ಸಚಿವರ ಹೇಳಿಕೆ - Mahanayaka

ಯಹೂದಿ ರಾಷ್ಟ್ರವೇ ನಮ್ಮ ಅಂತಿಮ ಗುರಿ: ಇಸ್ರೇಲ್ ಅರ್ಥ ಸಚಿವರ ಹೇಳಿಕೆ

10/10/2024

ಜೆರುಸಲೇಮ್ ನಿಂದ ಸಿರಿಯಾದ ರಾಜಧಾನಿ ಡಮಾಸ್ಕಸ್ ವರೆಗೆ ವ್ಯಾಪಿಸಿರುವ ವಿಶಾಲ ಯಹೂದಿ ರಾಷ್ಟ್ರವೇ ನಮ್ಮ ಅಂತಿಮ ಗುರಿ ಎಂದು ಇಸ್ರೇಲ್ ಅರ್ಥ ಸಚಿವ ಬೆಸಾಲೆಲ್ ಸ್ಮಾರ್ಟ್ ಸ್ಮೋಟ್ರಿಚ್ ಹೇಳಿದ್ದಾರೆ. ಆಲ್ಟ್ ಟಿವಿ ಪ್ರಸಾರ ಮಾಡಿದ ಡಾಕ್ಯುಮೆಂಟರಿಯಲ್ಲಿ ಸಚಿವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ಒಂದು ಯಹೂದಿ ರಾಷ್ಟ್ರವನ್ನು ಬಯಸುತ್ತೇನೆ. ಯಹೂದಿಯರ ಮೌಲ್ಯಗಳನ್ನು ಅನುಸರಿಸಿ ಕೆಲಸ ಮಾಡುವ ರಾಷ್ಟ್ರ ಅದಾಗಿರಬೇಕು ಎಂಬುದು ನನ್ನ ಆಸೆ. ಅದು ಜೆರುಸಲೇಮ್ ನಿಂದ ಸಿರಿಯಾದ ಡಮಾಸ್ಕಸ್ ವರೆಗೆ ವಿಸ್ತಾರವಾಗಿರುವ ರಾಷ್ಟ್ರವಾಗಿದೆ ಎಂದವರು ಹೇಳಿದ್ದಾರೆ.

ಡಮಾಸ್ಕಸ್ ವರೆಗೆ ವ್ಯಾಪಿಸಿರುವ ರಾಷ್ಟ್ರ ಎಂದು ಹೇಳುವಾಗ ಅದರಲ್ಲಿ ಫೆಲೆ ಸ್ತೀನ್ ಸಂಪೂರ್ಣ ಒಳಗೊಳ್ಳಲಿದೆ. ಹಾಗೆಯೇ ಜೋರ್ಡನ್, ಸಿರಿಯ, ಲೆಬನಾನ್, ಇರಾನ್, ಈಜಿಪ್ಟ್ ರಾಷ್ಟ್ರಗಳ ವಿವಿಧ ಭಾಗಗಳು ಮತ್ತು ಸೌದಿ ಅರೇಬಿಯಾದ ಭಾಗಗಳು ಕೂಡ ಈ ರಾಷ್ಟ್ರದ ಭಾಗವಾಗಲಿದೆ ಎಂದು ಅವರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ