ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ ಅವಹೇಳನ: ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ್ ಭಟ್'ಗೆ ಸಮನ್ಸ್ - Mahanayaka

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚರ್ಮದ ಬಣ್ಣದ ಬಗ್ಗೆ ಅವಹೇಳನ: ‘ವಿಶ್ವವಾಣಿ’ ಸಂಪಾದಕ ವಿಶ್ವೇಶ್ವರ್ ಭಟ್’ಗೆ ಸಮನ್ಸ್

vishweshwar bhat
21/10/2022

ನವದೆಹಲಿ: ದೇಶದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಾಕಾರಿ ಬರಹದ ಹಿನ್ನೆಲೆಯಲ್ಲಿ ಕನ್ನಡ ದೈನಿಕ ‘ವಿಶ್ವವಾಣಿ’ಯ ಪ್ರಧಾನ ಸಂಪಾದಕ ವಿಶ್ವೇಶ್ವರ್ ಭಟ್ ಅವರಿಗೆ ರಾಷ್ಟ್ರೀಯ ಮಹಿಳಾ ಆಯೋಗ(NCW) ಸಮನ್ಸ್ ನೀಡಿದೆ.

ಅಕ್ಟೋಬರ್ 26ರಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಆಯೋಗವು ವಿಶ್ವೇಶ್ವರ್ ಭಟ್ ಅವರಿಗೆ ನೋಟಿಸ್ ನೀಡಿದೆ ಎಂದು  ಆಯೋಗವು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.

ವಿಶ್ವೇಶ್ವರ್ ಭಟ್ ಅವರು ವಿಶ್ವವಾಣಿಯಲ್ಲಿ ಪ್ರಕಟವಾದ ‘ನೂರೆಂಟು ವಿಶ್ವ’ ಎಂಬ ಕಾಲಂನಲ್ಲಿ ಕಪ್ಪು ಬಣ್ಣವನ್ನು ಅವಹೇಳನ ಮಾಡುತ್ತಾ, ರಾಷ್ಟ್ರಪತಿ ಮುರ್ಮು ಅವರ ಹೆಸರನ್ನು ಪ್ರಸ್ತಾಪಿಸಿ ಕೀಳು ಮಟ್ಟದ ವ್ಯಂಗ್ಯ ಮಾಡಿದ್ದರು.

ಈ ಬಗ್ಗೆ ವ್ಯಾಪಕ ಟೀಕೆಗಳು ಬಂದರೂ ವಿಶ್ವೇಶ್ವರ ಭಟ್, ಟೀಕೆಗಳ ನಡುವೆಯೂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ವಿಶ್ವೇಶ್ವರ್ ಭಟ್ ಅವರಿಗೆ ಸಮನ್ಸ್ ನೀಡಲಾಗಿದ್ದು, ವಿಶ್ವೇಶ್ವರ್ ಭಟ್ ಅವರ ಬರಹದ ಪ್ರತಿಯನ್ನು ಹಂಚಿಕೊಂಡು ಟ್ವೀಟ್ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ