ಕಳಸ ಪಟ್ಟಣ ಬಂದ್: ಒತ್ತುವರಿ ತೆರವು ಕ್ರಮ ಖಂಡಿಸಿ ಇಂದು ಬೃಹತ್ ಹೋರಾಟ
ಚಿಕ್ಕಮಗಳೂರು: ರಾಜ್ಯ ಸರ್ಕಾರದ ಒತ್ತುವರಿ ತೆರವು ಕ್ರಮ ಖಂಡಿಸಿ ಕಳಸ ತಾಲೂಕು ಬಂದ್ ಆಚರಿಸಲಾಗುತ್ತಿದ್ದು, ಇಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಕಳಸ ಪಟ್ಟಣ ಬಂದ್ ನಡೆಸಲಾಗುತ್ತಿದೆ.
ಅಂಗಡಿ–ಮುಂಗಟ್ಟುಗಳನ್ನ ಮುಚ್ಚಿ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ರೈತರ ಹೋರಾಟಕ್ಕೆ ಸರ್ವ ಪಕ್ಷಗಳು ಸಾಥ್ ನೀಡಿವೆ.
ಕನ್ನಡ, ದಲಿತ ಸಂಘಟನೆ ಸೇರಿ ಬಹುತೇಕ ಸಂಘಟನೆಗಳು ಬೆಂಬಲ ನೀಡಿವೆ. ಕಳಸ ತಾಲೂಕು ಒತ್ತುವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಕಾಫಿ ಬೆಳಗಾರರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಒತ್ತುವರಿ ತೆರವು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 10 ಗಂಟೆಯಿಂದ ಕಳಸ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಲಿದೆ. ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: