ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ನ್ನು ಥಳಿಸಿಕೊಂಡ ಗ್ರಾಮಸ್ಥರು! - Mahanayaka

ಕಳ್ಳನನ್ನು ಹಿಡಿಯಲು ಹೋದ ಪೊಲೀಸ್ ನ್ನು ಥಳಿಸಿಕೊಂಡ ಗ್ರಾಮಸ್ಥರು!

ashwin
10/04/2021

ಕೋಲ್ಕತ್ತಾ: ಕಳ್ಳತನದ ಆರೋಪಿಯನ್ನು ಬಂಧಿಸಲು ಬಂದ ಪೊಲೀಸ್ ನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ದಿನಾಜ್ ​ಪುರದಲ್ಲಿ ನಡೆದಿದೆ.

ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಬಿಹಾರದ ಕಿಶಾನ್​ಗಂಜ್​ ಪೊಲೀಸ್​ ಠಾಣೆಯ ಸ್ಟೇಸನ್​ ಹೌಸ್​ ಆಫೀಸರ್​ ಅಶ್ವಿನ್​ ಕುಮಾರ್​ ಮೃತಪಟ್ಟ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಉತ್ತರ ದಿನಾಜ್​ಪುರ್​ನ ಗೋಲ್ಪೋಖರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಗ್ರಾಮದ ಗುಂಪೊಂದು ಅಶ್ವಿನ್​ ಅವರನ್ನು ಹಿಡಿದು ಥಳಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬೈಕ್​ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್​ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಪೊಲೀಸರ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಏಕಾಂಗಿಯಾಗಿಯೇ ಅಶ್ವಿನ್ ತೆರಳಿದ್ದರು ಎಂದು ಹೇಳಲಾಗಿದೆ.

ಅಶ್ವಿನ್​ ಅವರು ಬೈಕ್​ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್​ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಘಟನೆ ನಡೆದಿದೆ. ಇಸ್ಲಾಂಪುರ್​ ಎಸ್​ ಪಿ ನಮ್ಮೊಂದಿಗಿದ್ದಾರೆ. ಅಶ್ವಿನ್​ ಮೇಲೆ ದಾಳಿ ಮಾಡಿದವರನ್ನು ನಾವು ಬಂಧಿಸುತ್ತೇವೆ ಎಂದು ಐಜಿ ಪೂರ್ನಿಯಾ ರೇಂಜ್​ ಹೇಳಿದ್ದಾರೆ.

ಅಶ್ವಿನ್ ಗ್ರಾಮಕ್ಕೆ ಎಂಟ್ರಿಯಾಗುತ್ತಿದ್ದಂತೆಯೇ ಉತ್ತರ ದಿನಾಜ್​ಪುರದ ಗ್ರಾಮದಲ್ಲಿ ಜನರು ಏಕಾಏಕಿ ದಾಳಿ ನಡೆಸಿದ್ದು, ಕಲ್ಲು ಮೊದಲಾದ ವಸ್ತುಗಳಿಂದ ಹಲ್ಲೆ ನಡೆಸಿ ಅಶ್ವಿನ್ ಅವರನ್ನು ಹತ್ಯೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ