ಕರ್ನಾಟಕದ ಉಸೇನ್ ಬೋಲ್ಡ್, ಕಂಬಳ ವೀರ ಶ್ರೀನಿವಾಸ್ ಗೌಡಗೆ ಗಾಯ - Mahanayaka
7:44 PM Tuesday 12 - November 2024

ಕರ್ನಾಟಕದ ಉಸೇನ್ ಬೋಲ್ಡ್, ಕಂಬಳ ವೀರ ಶ್ರೀನಿವಾಸ್ ಗೌಡಗೆ ಗಾಯ

01/02/2021

ಬಂಟ್ವಾಳ: ಕರ್ನಾಟಕದ ಉಸೇನ್ ಬೋಲ್ಡ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಗೌಡ ಅವರಿಗೆ ಕಂಬಳ ಓಟದ ಸಂದರ್ಭದಲ್ಲಿ ಗಾಯವಾಗಿದ್ದು,  ಕೈ ಮತ್ತು ಎದೆಯ ಭಾಗಕ್ಕೆ  ಏಟು ತಗಲಿದೆ ಎಂದು ತಿಳಿದು ಬಂದಿದೆ.

ಈ ವರ್ಷದ ಮೊದಲ ಕಂಬಳ ಕೂಟದಲ್ಲಿಯೇ ಶ್ರೀನಿವಾಸ ಗೌಡರಿಗೆ ಏಟು ತಗಲಿದೆ. ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಓಡುತ್ತಿದ್ದ ವೇಳೆ ಆಯತಪ್ಪಿದ್ದು,  ಈ ವೇಳೆ ಅಡ್ಡಗೋಡೆಯ ಮೇಲೆ ಕೈ ಇಟ್ಟಿದ್ದಾರೆ. ಈ ವೇಳೆ ಅವರು ಬಿದ್ದಿದ್ದಾರೆ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಕಳೆದ ವರ್ಷ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದರು. ಆದರೆ ಈ ವರ್ಷದ ಆರಂಭದಲ್ಲಿಯೇ ಅವರಿಗೆ ದುರಾದೃಷ್ಟವಶಾತ್ ಏಟು ತಗಲಿದೆ.

ವರದಿಗಳ ಪ್ರಕಾರ, ಗಾಯದ ಹಿನ್ನೆಲೆಯಲ್ಲಿ ಮುಂದಿನ ಕೆಲವು ಪಂದ್ಯಗಳಲ್ಲಿ ಶ್ರೀನಿವಾಸ ಗೌಡ ಅವರು ಭಾಗವಹಿಸದಂತೆ ಸೂಚಿಸಲಾಗಿದೆ ಎಂದು ಎಂದು ತಿಳಿದು ಬಂದಿದೆ.




ಇತ್ತೀಚಿನ ಸುದ್ದಿ