ಕಾರ್ಕಳ ನಗರ ಠಾಣಾ ಹೆಡ್ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ ನಾಪತ್ತೆ - Mahanayaka
4:53 AM Saturday 25 - October 2025

ಕಾರ್ಕಳ ನಗರ ಠಾಣಾ ಹೆಡ್ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ ನಾಪತ್ತೆ

constable srutin shetty
21/10/2023

ಪಡುಬಿದ್ರೆ: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ(35) ಎಂಬವರು ಅ.19ರಿಂದ  ನಾಪತ್ತೆಯಾಗಿದ್ದಾರೆ.

ಕಾಪು ಜನಾರ್ಧನ ದೇವಸ್ಥಾನ ಬಳಿಯ ಅಂಗಡಿ ಮನೆ ನಿವಾಸಿಯಾಗಿರುವ ಇವರು ಅ.16ರಂದು ಕಾರ್ಕಳಕ್ಕೆ ಕರ್ತವ್ಯಕ್ಕೆ ತೆರಳಿದ್ದರು.

ಅ. 19 ರಂದು ಪತ್ನಿಗೆ ಫೋನ್ ಕರೆ ಮಾಡಿ ತಾನು ನಂದಿಕೂರಿನಲ್ಲಿ ಇದ್ದು ಮನೆಗೆ ಬರುವುದಾಗಿ ತಿಳಿಸಿದ್ದರು.

ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಪೂಜಾ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ