ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ, ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ - Mahanayaka

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆ, ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ

dss mangalore
29/10/2024

ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಸ್ವಾಭಿಮಾನಿ ಪ್ರೊ. ಬಿ.ಕೃಷ್ಣಪ್ಪ ಬಣ ದ.ಕ. ಜಿಲ್ಲಾ ಸಮಿತಿಯ “ಸರ್ವ ಸದಸ್ಯರ ಸಭೆ “ಯನ್ನು ಭಾನುವಾರ ಮಂಗಳೂರಿನ ಎನ್. ಜಿ. ಓ. ಹಾಲ್ ನಲ್ಲಿ ದ. ಸಂ.ಸ. ರಾಜ್ಯ ಸಂಚಾಲಕರಾದ ಎಂ. ಸೋಮಶೇಖರ್ ಹಾಸನ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


Provided by

ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ರವರ ಭಾವತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ. ಸಂ.ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ.ದೇವದಾಸ್,  ಕರ್ನಾಟಕದಲ್ಲಿ ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ಸಂಘಟನೆಯು ಪ್ರಸ್ತುತ 50 ರ ಸಂಭ್ರಮಾಚರಣೆಯ ಕಾಲಘಟ್ಟದಲ್ಲಿದ್ದು, ಈ ನಾಡಿನ ಶೋಷಿತರ ಧ್ವನಿಯಾಗಿ, ಸರಕಾರ ಹಾಗೂ ವ್ಯವಸ್ಥೆಯ ವಿರುದ್ಧ ಹಲವಾರು ಪ್ರಮುಖ ಹೋರಾಟಗಳನ್ನು ರೂಪಿಸಿ ನ್ಯಾಯ ಒದಗಿಸಿಕೊಡುವಲ್ಲಿ ಸಫಲವಾಗಿದೆ. ಸಂಘಟನೆಯ ಕಾರ್ಯಕರ್ತರು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಾಮಾಜಿಕ ಪರಿವರ್ತನಕಾರರ ವಿಚಾರಧಾರೆಗಳನ್ನು ಅರಿತು ಸಮಾಜ ಪರಿವರ್ತನೆಯಲ್ಲಿ ತೊಡಗಬೇಕು ಎಂದರು.

ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರು ಸಭೆಯಲ್ಲಿ ವರದಿ ವಾಚಿಸಿದರು. ಜಿಲ್ಲಾ ಖಜಾಂಚಿ ಲೆಕ್ಕ ಪತ್ರ ಮಂಡಿಸಿದ ನಂತರ ವರದಿ ಹಾಗೂ ಲೆಕ್ಕಪತ್ರದ ಮೇಲಿನ ಚರ್ಚೆ ನಡೆಸಿ ಅನುಮೋದನೆ ಪಡೆಯಲಾಯಿತು.

ನಂತರ ರಾಜ್ಯ ಸಂಚಾಲಕರಾದ ಎಂ. ಸೋಮಶೇಖರ್ ರವರು ಜಿಲ್ಲಾ ಸಮಿತಿಯನ್ನು ವಿಸರ್ಜಿಸಿ ಮುಂದಿನ ಅವಧಿಗೆ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ  ನಡೆಸಿದರು.

ನೂತನ ಜಿಲ್ಲಾ ಸಂಚಾಲಕರಾಗಿ ಸದಾಶಿವ ಪಡುಬಿದ್ರಿ, ಖಜಾಂಚಿಯಾಗಿ ನಾಗೇಶ್ ಚಿಲಿಂಬಿ, ಸಂಘಟನಾ ಸಂಚಾಲಕರಾಗಿ ರಘು.ಕೆ. ಎಕ್ಕಾರು(ಮಂಗಳೂರು), ಉಮೇಶ್ ಕೊದಿಂಬಾಳ(ಕಡಬ- -ಪುತ್ತೂರು), ಬಾಬು ಸರಪಾಡಿ(ಬಂಟ್ವಾಳ) ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಾನಂದ. ಡಿ., ರಾಜಯ್ಯ ಮಂಗಳೂರು, ಬಾಲು ಕುಂದರ್, ಮಂಜಪ್ಪ ಪುತ್ರನ್, ರಾಮದಾಸ್ ಮೇರೆಮಜಲು ಇವರನ್ನು ನೇಮಕ ಮಾಡಲಾಯಿತು.

ಜಿಲ್ಲಾ ಮಹಿಳಾ ಸಂಚಾಲಕಿಯಾಗಿ ಸರೋಜಿನಿ ಬಂಟ್ವಾಳ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರಾಗಿ ಕಮಲಾಕ್ಷ ಬಜಾಲ್ ಇವರನ್ನು ಪುನರಾಯ್ಕೆ ಮಾಡಲಾಯಿತು.

ರಾಜ್ಯ ಸಂಘಟನಾ ಸಂಚಾಲಕರಾದ ಅಂದಾನಿ ಸೋಮನಹಳ್ಳಿ ಮಂಡ್ಯ ಇವರು ನೂತನ ಜಿಲ್ಲಾ ಸಂಚಾಲಕರು ಹಾಗೂ ಖಜಾಂಚಿಯವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಿ ಶುಭಾಶಯಗಳು ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನೆಲೆಯಲ್ಲಿ ದ.ಸಂ.ಸಂ. ರಾಜ್ಯ ಸಂಚಾಲಕರಾದ ಎಂ.ಸೋಮಶೇಖರ್ ರವರು ಮಾತನಾಡಿ,  ಹಿಂದಿನ ಜಿಲ್ಲಾ ಸಮಿತಿಯು ದ.ಕ. ಜಿಲ್ಲೆಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳ ಮೂಲಕ ಶೋಷಿತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಹಿರಿಯರ ಮಾರ್ಗದರ್ಶನ, ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ನೂತನ ಸಮಿತಿಯು ಇನ್ನಷ್ಟು ಮುತುವರ್ಜಿ ವಹಿಸಿ ಈ ಜಿಲ್ಲೆಯಲ್ಲಿ ಕೋಮುವಾದ, ಜಾತಿವಾದ, ದಲಿತ ನೌಕರರಿಗೆ ಆಗುತ್ತಿರುವ ಕಿರುಕುಳಗಳ ವಿರುದ್ಧ ನಿರಂತರ ಹೋರಾಟ ನಡೆಸುವುದರ ಜೊತೆಗೆ ಸಂಘಟನೆಯ ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ಜಿಲ್ಲೆಯಲ್ಲಿ ಸಂಘಟನೆಯು ಬಲಿಷ್ಠವಾಗಿ ಮೂಡಿ ಬರಲಿ, ರಾಜ್ಯ ಸಮಿತಿಯು  ನಿಮ್ಮೊಂದಿಗೆ ಸದಾ ಇರುತ್ತದೆ. ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ ಹಾಗೂ ಜಿಲ್ಲಾ ಖಜಾಂಚಿಯಾಗಿ ಸುದೀರ್ಘ 12 ವರ್ಷಗಳ ಸಮಯ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಹೊಣೆಗಾರಿಕೆಯನ್ನು ನಿಭಾಯಿಸಿದ  ಸದಾಶಿವ ಪಡುಬಿದ್ರಿ ಇವರನ್ನು ಜಿಲ್ಲಾ ಸಮಿತಿಯ ಪರವಾಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು, ಜಿಲ್ಲಾ ಮಹಿಳಾ ಸಂಚಾಲಕರಾದ ಸರೋಜಿನಿ ಬಂಟ್ವಾಳ, ಮಂಗಳೂರು ತಾಲೂಕು ಸಂಚಾಲಕರಾದ ರವಿ ಪೇಜಾವರ, ಬಂಟ್ವಾಳ ತಾಲೂಕು ಸಂಚಾಲಕರಾದ ಬಾಬು ಸರಪಾಡಿ, ಕಡಬ ತಾಲೂಕು ಸಂಚಾಲಕರಾದ ಉಮೇಶ್ ಕೊದಿಂಬಾಳ, ಗಂಗಾಧರ ಕೋಟ್ಯಾನ್, ಪೇಜಾವರ ಮುಂತಾದವರು ಉಪಸ್ಥಿತರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ