ಕೊಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಚಿನ್ನದ ಪದಕ ವಿಜೇತೆಯಾಗಲು ಬಯಸಿದ್ದ ವೈದ್ಯೆ; ತಂದೆಯ ಹೇಳಿಕೆ

ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ತರಬೇತಿ ವೈದ್ಯೆಯ ತಂದೆ ಹೇಳಿಕೆಯೊಂದನ್ನು ನೀಡಿದ್ದಾರೆ.
ತನ್ನ ಮಗಳು ತನ್ನ ವೈಯಕ್ತಿಕ ಡೈರಿಯಲ್ಲಿ ತನ್ನ ಕೋರ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಆಗಬೇಕೆಂದು ಬರೆದಿದ್ದಳು ಎಂದು ಬಹಿರಂಗಪಡಿಸಿದ್ದಾರೆ. ಈ ಭಯಾನಕ ಘಟನೆಯ ದಿನದಂದು ಅವಳು ತನ್ನ ರಾತ್ರಿ ಪಾಳಿಗೆ ಹೊರಡುವ ಮೊದಲು ಅದನ್ನು ಬರೆದಿದ್ದಳು.
ಇಂಡಿಯಾ ಟುಡೇ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ತಮ್ಮ ಮಗಳು ಅಧ್ಯಯನಶೀಲಳಾಗಿದ್ದಳು ಮತ್ತು ದಿನಕ್ಕೆ 10-12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಾಳೆ ಎಂದು ಹೇಳಿದರು.
ಅವಳು ದಿನವಿಡೀ ಪುಸ್ತಕ ಓದುತ್ತಿದ್ದಳು. ಅವಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು ಎಂದು ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ (ಎಂಡಿ) ಓದುತ್ತಿದ್ದ ತನ್ನ ಮಗಳ ಬಗ್ಗೆ ಅವರು ಹೇಳಿದರು.
ತನ್ನ ಮಗಳ ಧೈರ್ಯವನ್ನು ಶ್ಲಾಘಿಸಿದ ಅವರು, “ವೈದ್ಯೆ ಆಗುವ ಗುರಿಯನ್ನು ತಲುಪಲು ಅವಳು ಸಾಕಷ್ಟು ಹೋರಾಡಿದ್ದಳು” ಎಂದು ಇಂಡಿಯಾ ಟುಡೇ ಟಿವಿಗೆ ತಿಳಿಸಿದರು. “ಅವಳನ್ನು ಬೆಳೆಸುವಾಗ ನಾವು ಅನೇಕ ತ್ಯಾಗಗಳನ್ನು ಮಾಡಿದ್ದೇವೆ” ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth