ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ: ನೀಟ್ ವಿದ್ಯಾರ್ಥಿಯಿಂದ ಹೆತ್ತವರಿಗೆ ನೋವಿನ ಪತ್ರ..! - Mahanayaka

ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ: ನೀಟ್ ವಿದ್ಯಾರ್ಥಿಯಿಂದ ಹೆತ್ತವರಿಗೆ ನೋವಿನ ಪತ್ರ..!

09/05/2024

ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ಹೆಚ್ಚು ಕಲಿಯಲು ನನಗೆ ಆಸಕ್ತಿ ಇಲ್ಲ. ನನ್ನ ಕೈಯಲ್ಲಿ 8000 ರೂಪಾಯಿ ಇದೆ. ಐದು ವರ್ಷ ಕಳೆದು ಮನೆಗೆ ಬರುತ್ತೇನೆ. ನಾನು ನನ್ನ ಕೈಯಲ್ಲಿರುವ ಮೊಬೈಲ್ ಫೋನನ್ನು ಮಾರಲು ಉದ್ದೇಶಿಸಿದ್ದೇನೆ. ಸಿಮ್ ಕಾರ್ಡ್ ಅನ್ನು ಪುಡಿ ಪುಡಿ ಮಾಡಲಿದ್ದೇನೆ. ನನ್ನನ್ನು ನೆನಪಿಸಿ ನೆನಪಿಸಿ ದುಃಖಿಸಬಾರದು ಎಂದು ಅಮ್ಮನಲ್ಲಿ ಹೇಳಬೇಕು. ನಾನು ಕೆಟ್ಟದ್ದೇನನ್ನೂ ಮಾಡಲಾರೆ. ಎಲ್ಲರ ಮೊಬೈಲ್ ಸಂಖ್ಯೆಯೂ ನನ್ನ ಕೈಯಲ್ಲಿದೆ. ಅಗತ್ಯ ಬಂದಾಗ ನಾನೇ ಕರೆ ಮಾಡುವೆ. ವರ್ಷದಲ್ಲಿ ಒಂದು ಬಾರಿ ಖಂಡಿತ ಎಲ್ಲರಿಗೂ ಕರೆ ಮಾಡುವೆ ಎಂದು ಮೆಸೇಜ್ ಮಾಡಿ ಮನೆ ಬಿಟ್ಟು ಹೋದ ನೀಟ್ ವಿದ್ಯಾರ್ಥಿಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ.

ರಾಜಸ್ಥಾನದ ಕೋಟವು ನೀಟ್ ಪರೀಕ್ಷಾರ್ಥಿಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡುವ ಪ್ರಸಿದ್ಧ ಕೇಂದ್ರವಾಗಿದೆ. ಇಲ್ಲಿಯ ತರಬೇತಿಯ ಒತ್ತಡವನ್ನು ತಾಳಿಕೊಳ್ಳಲಾರದೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಆಗಾಗ ನಡೆಯುತ್ತಿದೆ.

ಈ ವಿದ್ಯಾರ್ಥಿಯ ಹೆಸರು ರಾಜೇಂದ್ರ ಮೀನಾ. ಮಗನನ್ನು ಕಾಣುತ್ತಿಲ್ಲ ಎಂದು ಹೇಳಿ ಈತನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಸಂದೇಶ ದಿಂದಾಗಿ ಆತ ಊರು ಬಿಟ್ಟು ಹೋಗಿದ್ದಾನೆ ಅನ್ನೋದು ಹೆತ್ತವರಿಗೆ ಮತ್ತು ಪೊಲೀಸ್ರಿಗೆ ಗೊತ್ತಾಗಿದೆ. ಈ ಸಂದೇಶ ತಲುಪಿದ ಕೂಡಲೇ ಆತನ ಹೆತ್ತವರು ಕೋಟಕ್ಕೆ ಧಾವಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth


Provided by

ಇತ್ತೀಚಿನ ಸುದ್ದಿ