ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು! - Mahanayaka
10:09 AM Saturday 18 - January 2025

ಕೂದಲು ಕಸಿ ಮಾಡಿಸಿಕೊಂಡ ಮರುದಿನವೇ ಪೊಲೀಸ್ ಕಾನ್ ಸ್ಟೇಬಲ್ ದುರಂತ ಸಾವು!

hair fixing
13/03/2022

ಪಾಟ್ನಾ: ಕೂದಲು ಕಸಿ ಮಾಡಿಸಿಕೊಂಡ ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರು ಅನುಚಿತ ಚಿಕಿತ್ಸೆಯ ಪರಿಣಾಮ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದ್ದು,  ಕೂದಲು ಕಸಿ ಮಾಡಿಕೊಂಡ ಮರು ದಿನವೇ ಈ ದಾರುಣ ಘಟನೆ ನಡೆದು ಹೋಗಿದೆ.

ಬಿಹಾರದ ನಳಂದ ಜಿಲ್ಲೆಯ ರಾಜಗೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಬಿಘಾ ಗ್ರಾಮದ  ಮನೋರಂಜನ್ ಪಾಸ್ವಾನ್ ಮೃತಪಟ್ಟವರಾಗಿದ್ದು, ಇವರು ಬೋರಿಂಗ್ ಕೆನಾಲ್ ರಸ್ತೆಯ ‘Enhance’ ಎಂಬ ಖಾಸಗಿ ಕ್ಲಿನಿಕ್ ನಲ್ಲಿ ಕೂದಲು ಕಸಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.


ADS

ಮನೋರಂಜನ್ ಅವರ ಸಂಬಂಧಿಕರು ಹೇಳುವಂತೆ, ಚಿಕಿತ್ಸೆ ಪಡೆದ ನಂತರ, ಮನೋರಂಜನ್ ಅವರು ವಿಚಿತ್ರ ಸಮಸ್ಯೆಗಳಿಂದ ಬಳಲಿದ್ದಾರೆ. ಅವರಿಗೆ ತುರಿಕೆ, ಆಯಾಸ ಮೊದಲಾದ ಅಸ್ವಸ್ಥತೆಗಳು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು, ಅಷ್ಟರಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಬಿಗಡಾಯಿಸಿತ್ತು.ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇತ್ತ ಮನೋರಂಜನ್ ಸಾವು ಸಂಭವಿಸುತ್ತಿದ್ದಂತೆಯೇ ಕೂದಲು ಕಸಿ ಮಾಡಿದ ಕ್ಲಿನಿಕ್ ನ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಕ್ಲಿನಿಕ್ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೃತ ಮನೋರಂಜನ್ ಅವರಿಗೆ ಮೇ 11ರಂದು ಮದುವೆ ನಿಶ್ಚಯ ಮಾಡಲಾಗಿತ್ತು. ಇದರ ನಡುವೆಯೇ ಇಂತಹದ್ದೊಂದು ದುರಂತ ಸಂಭವಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಿಕ್ಷಣ, ಪರಿಸರದ ಜಾಗೃತಿಗಾಗಿ 24 ಸಾವಿರ ಕಿ.ಮೀ. ಸೈಕಲ್ ಜಾಥಾ ಪೂರೈಸಿದ ಬೆಂಗಳೂರಿನ ಯುವಕರು

ಎಚ್.​​​​​​​​​ಡಿ.ಕುಮಾರಸ್ವಾಮಿಗೆ ಅಭಿಮಾನಿಯಿಂದ ಜೋಡೆತ್ತು ಉಡುಗೊರೆ

ಕೌಟುಂಬಿಕ ಕಲಹ: ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು

ಇತ್ತೀಚಿನ ಸುದ್ದಿ