ಕುಲಪತಿ ಹುದ್ದೆ ಕೊಡಿಸುತ್ತೇನೆಂದು ರಾಮಸೇನೆಯ ಮುಖಂಡ ಎಂತಹ ಕೆಲಸ ಮಾಡಿದ್ದಾರೆ ನೋಡಿ
ಮಂಗಳೂರು: ಶ್ರೀರಾಮನ ಹೆಸರು ಹೇಳಿ ಹೀಗಾ ಮಾಡೋದು…! ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಪ್ರಾಧ್ಯಾಪಕರೋರ್ವರಿಗೆ ರಾಮಸೇನೆಯ ಮುಖಂಡ ವಂಚಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರರನ್ನು ಬಂಧಿಸಲಾಗಿದೆ
ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿವೇಕ್ ಆಚಾರ್ಯ ಎಂಬವರಿಗೆ ಕುಲಪತಿ ಹುದ್ದೆಯನ್ನು ಕೊಡಿಸುವುದಾಗಿ ನಂಬಿಸಿ ರಾಮಸೇನೆಯ ಪ್ರಸಾದ್ ಅತ್ತಾವರ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
.ತನಗೆ ಗಣ್ಯ ವ್ಯಕ್ತಿಗಳ ಪರಿಚಯವಿದೆ ಎಂದು ಪ್ರಾಧ್ಯಾಪಕರನ್ನು ಪುಸಲಾಯಿಸಿದ್ದ ಈತ ಪ್ರಾಧ್ಯಾಪಕರನ್ನು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಮಾಡುವುದಾಗಿ ನಂಬಿಸಿದ್ದು, 17.5 ಲಕ್ಷ ರೂಪಾಯಿಗಳನ್ನು ಈಗಾಗಲೇ ಪ್ರಾಧ್ಯಾಪಕನಿಂದ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಉಳಿದ ಹಣದ ವಸೂಲಿಗೆ ಮೂರು ಖಾಲಿ ಚೆಕ್ ನ್ನು ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತ ಕುಲಪತಿ ಹುದ್ದೆಯೂ ಇಲ್ಲ, ಕೊಟ್ಟ ಹಣವೂ ಇಲ್ಲದ ಸ್ಥಿತಿಗೆ ತಲುಪಿದಾಗ ಹಣ ವಾಪಸ್ ಕೊಡಿ ಎಂದು ಆಚಾರ್ಯ ಕೇಳಿದ್ದು ಈ ವೇಳೆ ಪ್ರಸಾದ್ ಜೀವ ಬೆದರಿಕೆ ಹಾಕಿರುವುದಾಗಿ ಕಂಕನಾಡಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಸೀದಿ ಮೈಕ್ ಬಳಕೆ ಮಾಡಿದರೆ 1 ಸಾವಿರ ಠಾಣೆಗಳಲ್ಲಿ ದೂರು ದಾಖಲು | ಪ್ರಮೋದ್ ಮುತಾಲಿಕ್