ಕೊಹ್ಲಿ ರೆಸ್ಟೋರೆಂಟ್ ನಲ್ಲಿ ಬೇಯಿಸಿದ ಜೋಳಕ್ಕೆ ಇಷ್ಟೊಂದು ಬೆಲೆಯೇ?: ಬೇಸರದಿಂದ ಪೋಸ್ಟ್ ಮಾಡಿದ ವಿದ್ಯಾರ್ಥಿನಿ

Virat Kohli: ಹೈದರಾಬಾದ್: ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಒಡೆತನದ ರೆಸ್ಟೊ ಬಾರ್ ಒನ್ 8 ಕಮ್ಯೂನ್ ರೆಸ್ಟೋರೆಂಟ್ ನಲ್ಲಿ ಬೇಯಿಸಿದ ಜೋಳ ಆರ್ಡರ್ ಮಾಡಿದ ವಿದ್ಯಾರ್ಥಿನಿಯೊಬ್ಬಳು, ದುಬಾರಿ ಬೆಲೆಯ ಬಗ್ಗೆ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ವಿದ್ಯಾರ್ಥಿನಿ ಈ ಟ್ವೀಟ್ ಮಾಡಿದ್ದು, ಬೇಯಿಸಿದ ಜೋಳಕ್ಕೆ ಕೊಹ್ಲಿ ಒಡೆತನದ ರೆಸ್ಟೋರೆಂಟ್ ನಲ್ಲಿ ಬರೋಬ್ಬರಿ 525 ರೂಪಾಯಿ ಬೆಲೆ ಇದೆ ಎಂದು ವಿದ್ಯಾರ್ಥಿನಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗಿದೆ.
ಇನ್ನೂ ವಿದ್ಯಾರ್ಥಿನಿ ಮಾಡಿರುವ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ಬೆಲೆ ತಿಳಿದೇ ಆರ್ಡರ್ ಮಾಡಿದ್ದೀರಿ, ಹಾಗಾಗಿ ಈಗ ಅಳಬೇಕಾಗಿಲ್ಲ ಎಂದು ಕೆಲವರು ಹೇಳಿದ್ದಾರೆ.
ಇನ್ನು ಕೆಲವರು ರೆಸ್ಟೋರೆಂಟ್ ನ ವಾತಾವರಣ, ಸ್ವಚ್ಛತೆಯಂತಹ ವಿಚಾರಕ್ಕೆ ಹೆಚ್ಚಿನ ಬೆಲೆ ವಿಧಿಸಲಾಗುತ್ತದೆ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಕೆಲವರು ಆದರೂ ಬೇಯಿಸಿದ ಜೋಳಕ್ಕೆ ಇಷ್ಟೊಂದು ಬೆಲೆ ಹೆಚ್ಚಾಯ್ತು, ಇಷ್ಟೊಂದು ಬೆಲೆ ವಿಧಿಸುವ ಅಗತ್ಯವಿರಲಿಲ್ಲ, ಐಶಾರಾಮಿ ಹೊಟೇಲ್ ಗಳ ಬೆಲೆಗಳಿಗೆ ಕಡಿವಾಣ ಹಾಕಬೇಕು ಎನ್ನುವ ಮಾತುಗಳನ್ನೂ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: