ಮಹಿಳೆಯರ ಒಳ ಉಡುಪಿನ ಬಗ್ಗೆ ಕಾಮೆಂಟ್: ವಿವಾದ ಸೃಷ್ಟಿಸಿದ ಲಾಯರ್ ಜಗದೀಶ್

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಲಾಯರ್ ಜಗದೀಶ್ ವರ್ತನೆ ಮಿತಿ ಮೀರುತ್ತಿದೆ. ಇತ್ತೀಚೆಗೆ ಬಿಗ್ ಬಾಸ್ ಶೋ ವಿರುದ್ಧ ಮಾತನಾಡಿದ್ರು ಆದ್ರೆ ಜನ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೆ ಇದೀಗ ಮಹಿಳೆಯರ ಒಳ ಉಡುಪಿನ ಬಗ್ಗೆ ಕಾಮೆಂಟ್ ಮಾಡಿ ವಿವಾದ ಸೃಷ್ಟಿಸಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ಗೆ ಬಿಗ್ ಬಾಸ್ ಅವಕಾಶ ನೀಡಿದರು. ಸ್ವರ್ಗ ನಿವಾಸಿಗಳಿಗೆ ಮಾತ್ರವೇ ಇದರಲ್ಲಿ ಭಾಗಿಯಾಗಲು ಅವಕಾಶವಿತ್ತು. 6 ಮಂದಿಯನ್ನು ಸ್ವರ್ಗ ನಿವಾಸಿಗಳು ಒಮ್ಮತದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶಿಸಿತು. ಉಗ್ರಂ ಮಂಜು ಈ ವೇಳೆ ವೋಟಿಂಗ್ ಮೂಲಕ ಸ್ಪರ್ಧಿಗಳನ್ನ ಆಯ್ಕೆ ಮಾಡೋಣ ಅಂತ ಸಲಹೆ ಕೊಟ್ಟರು, ಇದು ಜಗದೀಶ್ ಆಕ್ರೋಶಕ್ಕೆ ಕಾರಣವಾಯಿತು.
ಉಗ್ರಂ ಮಂಜು ವಿರುದ್ಧ ಸಿಡಿದೆದ್ದ ಜಗದೀಶ್. ಮಾತು ಮಿತಿ ಮೀರುತ್ತಿತ್ತು. ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ. ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ ಎಂದು ಅವಾಜ್ ಹಾಕಿದರು.
ಮಂಜು ಇದಕ್ಕೆ ಉತ್ತರಿಸದೇ ಬ್ರೋ ಬ್ರೋ ಎಂದು ಕರೆಯುತ್ತಿದ್ದರು. ಈ ವೇಳೆ ಬ್ರೋ ಪ್ಯಾಂಟೀಸ್ ಎಲ್ಲ ನೋಡಿದೀನಿ. ನನ್ನ ಹೆಂಡತಿ ಹಾಕೋದು ಇದನ್ನೇ ಎಂದು ಹೇಳಿದ್ದಾರೆ.
ಈ ಮಾತು ಮನೆ ಮಂದಿಗೆ ಮುಜುಗರ ಉಂಟು ಮಾಡಿತು. ನಮಗೆ ಇನ್ಸೆಕ್ಯೂರ್ ಫೀಲ್ ಆಗ್ತಿದೆ. ಹುಡುಗಿಯರ ವೈಯಕ್ತಿಕ ವಿಚಾರಕ್ಕೆ ಬರುತ್ತಿದ್ದಾರೆ ಎಂದು ಭವ್ಯಾ ಗೌಡ ಟೀಕಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: