ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಪತ್ತೆಯಾದ ಚಿರತೆ ಮರಿಗಳು
ಗುಂಡ್ಲುಪೇಟೆ: ಕಬ್ಬಿನ ತೋಟದಲ್ಲಿ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮದಲ್ಲಿ ನಡೆದಿದೆ.
ಹಂಗಳ ಗ್ರಾಮದ ರೈತ ಮಹೇಶ್ ಅವರ ಜಮೀನನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚೀರಾಟದ ಶಬ್ದ ಕೇಳಿತ್ತು. ಹೀಗಾಗಿ ರೈತರು ಪರಿಶೀಲಿಸಿದ ವೇಳೆ ಒಂದು ಹೆಣ್ಣು ಇನ್ನೊಂದು ಗಂಡು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ.
ಈ ಪ್ರದೇಶದಲ್ಲಿ ಗೂಡಿನಂತೆ ಮಾಡಿಕೊಂಡು ಚಿರತೆ ಮರಿಯಿಟ್ಟಿತ್ತು. ಸದ್ಯ ಚಿರತೆ ಮರಿಗಳನ್ನು ರಕ್ಷಿಸಿರುವ ರೈತರು ಟೊಮೆಟೋ ಟ್ರೇನಲ್ಲಿ ಇಟ್ಟು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಚಿರತೆ ಮರಿಗಳಿಗೆ ಎರಡು ತಿಂಗಳ ವಯಸ್ಸು ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಚಿರತೆ ಮರಿಗಳು ಪತ್ತೆಯಾದ ಜಮೀನಿನಲ್ಲಿ ಬೋನು ಇರಿಸಿ, ತಾಯಿ ಚಿರತೆ ಜೊತೆಗೆ ಸೇರಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: