ರೈಲ್ವೆ ಹಳಿಯಲ್ಲಿ ಎಲ್ಪಿಜಿ ಸಿಲಿಂಡರ್ ಪತ್ತೆ: ತಪ್ಪಿದ ದೊಡ್ಡ ರೈಲು ದುರಂತ - Mahanayaka
10:29 PM Tuesday 10 - December 2024

ರೈಲ್ವೆ ಹಳಿಯಲ್ಲಿ ಎಲ್ಪಿಜಿ ಸಿಲಿಂಡರ್ ಪತ್ತೆ: ತಪ್ಪಿದ ದೊಡ್ಡ ರೈಲು ದುರಂತ

13/10/2024

ಉತ್ತರಾಖಂಡದ ರೂರ್ಕಿ ಬಳಿಯ ರೈಲ್ವೆ ಹಳಿಗಳಲ್ಲಿ ಖಾಲಿ ಎಲ್ಪಿಜಿ ಸಿಲಿಂಡರ್ ಪತ್ತೆಯಾಗಿದ್ದು ದೊಡ್ಡ ದುರಂತವನ ತಪ್ಪಿಸಲಾಗಿದೆ. ಸಿಲಿಂಡರ್ ಅನ್ನು ಸರಕು ರೈಲಿನ ಲೋಕೋ ಪೈಲಟ್ ಗುರುತಿಸಿ ತಕ್ಷಣವೇ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸಂಭಾವ್ಯ ದುರಂತವನ್ನು ತಪ್ಪಿಸಿದ್ದಾರೆ.

ಧಂದೇರಾದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲಾಂಡೌರಾ ಮತ್ತು ಧಂದೇರಾ ನಿಲ್ದಾಣಗಳ ನಡುವೆ ಬೆಳಿಗ್ಗೆ 6:35 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಉಪಾಧ್ಯಾಯ ತಿಳಿಸಿದ್ದಾರೆ. ಇಲ್ಲಿದ್ದ ಸಿಲಿಂಡರ್ ಖಾಲಿಯಾಗಿರುವುದನ್ನು ದೃಢಪಡಿಸಲಾಯಿತು. ಇದನ್ನು ಧಂದೇರಾದ ಸ್ಟೇಷನ್ ಮಾಸ್ಟರ್ ವಶದಲ್ಲಿ ಇರಿಸಲಾಗಿದೆ.

ಈ ಘಟನೆಯು ಭಾರತದಾದ್ಯಂತ ರೈಲು ಹಳಿ ತಪ್ಪಿಸುವ ಕೃತ್ಯವನ್ನು ಬಯಲಿಗೆಳೆದಿದೆ. ಆಗಸ್ಟ್ ನಿಂದ ರಾಷ್ಟ್ರವ್ಯಾಪಿ ಇಂತಹ 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೆ ಬಹಿರಂಗಪಡಿಸಿದೆ. ಇತ್ತೀಚಿನ ಪ್ರಕರಣದಲ್ಲಿ ಕಾನ್ಪುರದ ಹಳಿಗಳಲ್ಲಿ ಮತ್ತೊಂದು ಎಲ್ಪಿಜಿ ಸಿಲಿಂಡರ್ ಪತ್ತೆಯಾಗಿದೆ.

ಜೂನ್ 2023 ರಿಂದ ರೈಲುಗಳನ್ನು ಹಳಿ ತಪ್ಪಿಸುವ ಪ್ರಯತ್ನದಲ್ಲಿ ಎಲ್ಪಿಜಿ ಸಿಲಿಂಡರ್ ಗಳು, ಬೈಸಿಕಲ್‌ಗಳು, ಕಬ್ಬಿಣದ ರಾಡ್ ಗಳು ಮತ್ತು ಸಿಮೆಂಟ್ ಬ್ಲಾಕ್ ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಒಳಗೊಂಡ 24 ಘಟನೆಗಳು ನಡೆದಿವೆ. ಇವುಗಳಲ್ಲಿ ಆಗಸ್ಟ್ ನಲ್ಲಿ 15 ಘಟನೆಗಳು ಸಂಭವಿಸಿದ್ದು, ಸೆಪ್ಟೆಂಬರ್ ನಲ್ಲಿ ಇನ್ನೂ ಐದು ಘಟನೆಗಳು ಸಂಭವಿಸಿದ್ದು, ಇದು ರೈಲ್ವೆ ಸುರಕ್ಷತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ