ಗೂಗಲ್ ಪೇಗೆ ಉಡುಗೊರೆ ಕಳುಹಿಸಿ ಎಂದು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕೋರಿದ ಕುಟುಂಬಸ್ಥರು - Mahanayaka

ಗೂಗಲ್ ಪೇಗೆ ಉಡುಗೊರೆ ಕಳುಹಿಸಿ ಎಂದು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಕೋರಿದ ಕುಟುಂಬಸ್ಥರು

19/01/2021

ಮಧುರೈ: “ಮದುವೆಗೆ ಬರಬೇಕು ಅಂತಿದ್ದೆ ಕಣೋ ಆದ್ರೆ… ಈ ಕೊರೊನಾದಿಂದ ಬರಲು ಆಗಲಿಲ್ಲ, ಮುಯ್ಯಿ ಕೂಡ ಕೊಡಲು ಸಾಧ್ಯವಾಗಲಿಲ್ಲ” ಎಂದು ಕೊರೊನಾ ಕಾಲದಲ್ಲಿ ಸಾಮಾನ್ಯವಾಗಿ ಸ್ನೇಹಿತರನ್ನು ಕುಟುಂಬಸ್ಥರನ್ನು ಮೋಸ ಮಾಡುವುದು ಸಾಮಾನ್ಯವಾಗಿದೆ. ಆದರೆ,  ತಮಿಳುನಾಡಿನ ಮಧುರೈನಲ್ಲಿ ಮದುವೆಗೆ ಬರಲು ಸಾಧ್ಯವಾಗದೇ ಇರುವವರಿಗೆ ಉಡುಗೊರೆ ನೀಡಲು ಹೊಸ ಮಾರ್ಗದರ್ಶವನ್ನು ನೀಡುವ ಮೂಲಕ ಹೊಸ ಉಡುಗೊರೆ ಸಂಸ್ಕೃತಿಯನ್ನು ಕುಟುಂಬಸ್ಥರು ಆರಂಭಿಸಿದ್ದಾರೆ.

ಮದುವೆ ಆಮಂತ್ರಣ ಕಾರ್ಡ್ ನಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಸ್ಕ್ಯಾನ್ ಕೋಡ್ ಮುದ್ರಿಸಿರುವ ಕುಟುಂಬಸ್ಥರು, ದಂಪತಿಗಳಿಗೆ ಉಡುಗೊರೆ ಕೊಡಲು ಬಯಸುವವರು ಈ ಕೋಡ್ ಸ್ಕ್ಯಾನ್ ಮಾಡಿ ನೀಡಬಹುದು ಎಂದು ಮುದ್ರಿಸಿದ್ದಾರೆ.

ಈ ಐಡಿಯಾವನ್ನು ಬೆಂಗಳೂರಿನ ಕಾರ್ಯಕ್ರಮ ನಿರ್ವಾಹಕಿ ಟಿ.ಜೆ.ಸಿವಸಂಕರಿ ಎಂಬವರು ನೀಡಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ನೂರಾರು ಜನರು ಜಮಾಯಿಸಿ, ಕೊರೊನಾಕ್ಕೆ ಬಲಿಯಾಗುವುದಕ್ಕಿಂತ, ಆ್ಯಪ್ ಗಳ ಮೂಲಕವೇ ಉಡುಗೊರೆ ನೀಡಬಹುದು ಎಂದು ಅವರು ಹೇಳಿದ್ದಾರೆ.

ಈ ಕಾರ್ಡ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಇದೊಂದು ಹೊಸ ಪ್ರಯತ್ನ ಎಂದು ಹೇಳಿದರೆ, ಇನ್ನು ಕೆಲವರಿಗೆ ಇದೊಂದು ಹಾಸ್ಯದ ವಸ್ತುವಾಗಿದೆ. ಒಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ ಎನ್ನುವುದಕ್ಕೆ ಇದೊಂದು ಮಾದರಿಯಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ