ಮದುವೆ ಮನೆ ಊಟ ಮಾಡಿ 22 ಮಂದಿ ಅಸ್ವಸ್ಥ! - Mahanayaka
1:39 AM Thursday 30 - November 2023

ಮದುವೆ ಮನೆ ಊಟ ಮಾಡಿ 22 ಮಂದಿ ಅಸ್ವಸ್ಥ!

30/12/2020

ದಾವಣಗೆರೆ: ಮದುವೆ ಊಟ ಮಾಡಿ 22 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ.

ಫಲವನಹಳ್ಳಿ ಗ್ರಾಮದ ಸೀತಾ ನಾಯ್ಕ ಅವರ ಪುತ್ರನ ವಿವಾಹ ಸೋಮವಾರ ನಡೆದಿದ್ದು, ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಆದರೆ ಊಟ ಮಾಡಿದ 22 ಮಂದಿಗೆ ರಾತ್ರಿ ವಾಂತಿ, ಭೇದಿ, ತಲೆಸುತ್ತು ಕಾಣಿಸಿಕೊಂಡಿತ್ತು.

ಅಸ್ವಸ್ಥರನ್ನು ತಕ್ಷಣವೇ ಸವಳಂಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ  ತಿಳಿಸಿದ್ದಾರೆ. ಇನ್ನೂ ಈ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಅಡುಗೆ ಪದಾರ್ಥಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿ