ನೋಡಿ ಈ ರಾಜ್ಯದಲ್ಲಿ ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್! - Mahanayaka

ನೋಡಿ ಈ ರಾಜ್ಯದಲ್ಲಿ ಎಮ್ಮೆಗಳಿಗೂ ಬ್ಯೂಟಿ ಪಾರ್ಲರ್!

29/12/2020

ಕೊಲ್ಹಾಪುರ: ಎಮ್ಮೆಗಳೂ ಇನ್ನೂ ಬ್ಯೂಟಿಪಾರ್ಲರ್ ಗೆ ಹೋಗಲಿವೆ. ಈ ವ್ಯಕ್ತಿಯೊಬ್ಬರು ಎಮ್ಮೆಗಳಿಗೂ ಬ್ಯೂಟಿಪಾರ್ಲರ್ ತೆರೆದಿದ್ದಾರೆ. ಹೇರ್ ಕಟ್, ಸ್ನಾನ, ಎಣ್ಣೆ ಮಸಾಜ್ ಇವೆಲ್ಲವೂ ಇನ್ನು ಮುಂದೆ ಎಮ್ಮೆಗಳಿಗೆ ಲಭಿಸಲಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಿಜಯ ಸೂರ್ಯವಂಶಿ ಎಂಬವರು ಈ ಪಾರ್ಲರ್ ಆರಂಭಿಸಿದ್ದಾರೆ. ಸರ್ಕಾರದಿಂದ ಅನುದಾನಪಡೆದುಕೊಂಡು ಅವರು ಈ ಪಾರ್ಲರ್ ಆರಂಭ ಮಾಡಲು ಮುಂದಾಗಿದ್ದಾರೆ. ದಿನವೊಂದಕ್ಕೆ 30 ಎಮ್ಮೆಗಳು ಪಾರ್ಲರ್ ಗೆ ಬರುತ್ತಿವೆಯಂತೆ. ರೈತರಿಂದ ಇವರು ಸದ್ಯ ಫೀಸ್ ತೆಗೆದುಕೊಳ್ಳುತ್ತಿಲ್ವಂತೆ. ಅವುಗಳ ಸೆಗಣಿ ಹಾಗೂ ಮೈತೊಳೆದ ನೀರನ್ನು ಗದ್ದೆಗಳಿಗೆ ಬಳಸಿಕೊಳ್ಳುತ್ತಿದ್ದಾರಂತೆ.

ಸೂರ್ಯವಂಶಿ ಅವರು ಈ ಪಾರ್ಲರ್ ತೆರೆಯಲು ಮುಖ್ಯ ಕಾರಣವೇನೆಂದರೆ, ಕೊಲ್ಹಾಪುರ ಜಿಲ್ಲೆಯಲ್ಲಿ ಹರಿಯುವ  ಪಂಚಗಂಗಾ  ಈಗಾಗಲೇ ಕೈಗಾರಿಕೆಗಳ ತ್ಯಾಜ್ಯಗಳನ್ನು ಹರಿಯಬಿಟ್ಟಿರುವುದರಿಂದ ಮಾಲಿನ್ಯಕ್ಕೊಳಗಾಗಿದೆ.  ಹೈನುಗಾರಿಕೆ ಮಾಡುವವರು ಕೂಡ ಎಮ್ಮೆಗಳನ್ನು ನದಿಯಲ್ಲಿ ತೊಳೆಯುತ್ತಿದ್ದಾರೆ. ಹಾಗಾಗಿ ನದಿಯ ನೀರು ಕಲುಶಿತವಾಗಬಾರದು ಎನ್ನುವ ಕಾರಣಕ್ಕಾಗಿ ಎಮ್ಮೆಗಳಿಗೂ ಪಾರ್ಲರ್ ನಡೆಸಲು ಸೂರ್ಯವಂಶಿ ನಿರ್ಧರಿಸಿದ್ದರಂತೆ. ಮಹಾರಾಷ್ಟ್ರ ಸರ್ಕಾರದಿಂದ ಎಮ್ಮೆಗಳ ಬ್ಯೂಟಿ ಪಾರ್ಲರ್ ಗಾಗಿ  15 ಲಕ್ಷ ರೂ. ಸಹಾಯಧನವನ್ನು ಸೂರ್ಯವಂಶಿ ಪಡೆದುಕೊಂಡಿದ್ದಾರೆ.

 

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ