ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿ - Mahanayaka
6:25 AM Wednesday 15 - October 2025

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಮಗುವಿಗೆ ಜನ್ಮ ನೀಡಿದ ಬಾಲಕಿ

bantwala
20/05/2022

ಬಂಟ್ವಾಳ ;  ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಅಪ್ರಾಪ್ತೆಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.


Provided by

17 ವರ್ಷದ ಬಾಲಕಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದಾಳೆ. ಎರಡು ವರ್ಷಗಳ ಹಿಂದೆ ಸ್ನೇಹಿತೆ ಮದುವೆ ಕಿನ್ನಿಗೋಳಿಯಲ್ಲಿ ನಡೆದಾಗ ಅಲ್ಲಿನ ಕೊಲ್ಲೂರು ವಾಸಿ ವಿದ್ಯಾರ್ಥಿನಿಗೆ ಮೊಬೈಲ್​  ಮೂಲಕ ಪರಿಚಯವಾಗಿದ್ದರು.

2021ರ ಜುಲೈನಲ್ಲಿ ಆರೋಪಿಯು ಬಾಲಕಿಯನ್ನು ಮನೆಗೆ ಕರೆಸಿ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಕ್ಟೋಬರ್ ​ನಲ್ಲೂ ಇದೇ ರೀತಿಯ ಕೃತ್ಯ ನಡೆಸಿದ್ದಾನೆ.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನ ಬಂಧನ ಮಾಡಿರುವ ಬಂಟ್ವಾಳ ನಗರ ಪೊಲೀಸರು ಪೋಕ್ಸೋ ಪ್ರಕರಣದಡಿ ದೂರು ದಾಖಲು ಮಾಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜೂನ್ 1ರಿಂದ ಜುಲೈ 31ರವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಮುಂದಕ್ಕೆ ಚಲಿಸಿ ಎಂದ ಗೂಗಲ್ ಮ್ಯಾಪ್: ಹೊಳೆಗೆ ಕಾರು ಇಳಿಸಿದ ಚಾಲಕ

ವಿಶ್ವಕ್ಕೆ ಆತಂಕ ಸೃಷ್ಟಿಸಿದ ಮಂಕಿ ಪಾಕ್ಸ್: ಮೂರು ದೇಶಗಳಲ್ಲಿ ರೋಗ ಪತ್ತೆ | ಇದರ ಲಕ್ಷಣಗಳೇನು?

ಸೋಲಿಲ್ಲದ ಸರದಾರ ಬಾಕ್ಸರ್ ಮೂಸಾ ಅಸ್ಕಾನ್ ರಿಂಗ್ ನಲ್ಲೇ ಹೃದಯಾಘಾತದಿಂದ ನಿಧನ

ಎಸೆಸೆಲ್ಸಿ ಫಲಿತಾಂಶ: ದಲಿತ ಕಾರ್ಮಿಕನ ಪುತ್ರ ರಾಜ್ಯಕ್ಕೆ ಟಾಪರ್ | ಅಮಿತ್ ನ ಸಾಧನೆಯ ಹಿಂದಿದ್ದ ಕಷ್ಟಗಳೇನು?

 

ಇತ್ತೀಚಿನ ಸುದ್ದಿ