ಮದ್ಯಪಾನಿಗಳಿಂದ ತಾಯಿ -ಮಗಳ ಅತ್ಯಾಚಾರ | ಕಾಪಾಡುವುದು ಬಿಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸ್ಥಳೀಯ ವ್ಯಕ್ತಿ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಘೋರ ಘಟನೆಯೊಂದು ನಡೆದಿದ್ದು, ಬೀದಿ ಬದಿಯಲ್ಲಿ ಮಲಗಿದ್ದ ತಾಯಿ ಹಾಗೂ ಮಗಳನ್ನು ಇಬ್ಬರು ಮದ್ಯಪಾನಿಗಳು ಅತ್ಯಾಚಾರ ನಡೆಸಿದ್ದು, ಈ ವೇಳೆ ವ್ಯಕ್ತಿಯೊಬ್ಬ ಘಟನೆಯನ್ನು ನೋಡಿಯೂ ತಾಯಿ ಮಗಳನ್ನು ರಕ್ಷಿಸುವುದು ಬಿಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಮಾಹಿತ ಸಂಗ್ರಹಿಸ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಾಜಿಪುರದ ಅಮಿತ್ ಮತ್ತು ಜಹಂಗಿರ್ಪುರಿಯ ಸೋನು ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರನ್ನು ಪೊಲೀಸರು ಪತ್ತೆ ಮಾಡಿದ್ದರು. ಇವರ ಪತ್ತೆಗಾಗಿ ಸಿಸಿ ಕ್ಯಾಮರ ದೃಶ್ಯಾವಳಿಗಳ ಸಹಾಯವನ್ನು ಪೊಲೀಸರ ಪಡೆದಿದ್ದರು. 35 ವರ್ಷದ ತಾಯಿ ಹಾಗೂ 18 ವರ್ಷದ ವಿಕಲಚೇತನ ಮಗಳು ಅತ್ಯಾಚಾರ ಸಂತ್ರಸ್ತೆಯರಾಗಿದ್ದಾರೆ.
ತಾಯಿ ಮತ್ತು ಮಗಳು ಚಿಂದಿ ಹಾಯ್ದು ಜೀವನ ಸಾಗಿಸುತ್ತಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಮಹಿಳೆ ಹಾಗೂ ಆಕೆಯ ಮಗಳನ್ನು ಬಿಟ್ಟ ಗಂಡ ಹಳ್ಳಿಗೆ ತೆರಳಿದ್ದಾನೆ . ಆ ಬಳಿಕ ತಾಯಿ ಮಗಳು ಜೊತೆಯಾಗಿ ಬದುಕುತ್ತಿದ್ದರು. ಅತ್ಯಾಚಾರದ ವೇಳೆ ಸ್ಥಳೀಯ ವ್ಯಕ್ತಿ ವಿಡಿಯೋ ಮಾಡಿದ್ದಾನೆ. ತಾಯಿ ಮಗಳನ್ನು ಕಾಪಾಡುವುದು ಬಿಟ್ಟು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಈ ಸಂಬಂಧ ಇದೀಗ ಈತನ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.